ಒಮೈಕ್ರಾನ್ ಬಳಿಕ ಮತ್ತೊಂದು ರೂಪಾಂತರಿ IHU ಪತ್ತೆ!

masthmagaa.com:

ಈಗಾಗಲೇ ಕೊರೋನಾದ ಒಮೈಕ್ರಾನ್ ಹಾವಳಿ ಜೋರಾಗಿದ್ದು, ಇದ್ರ ನಡುವೆಯೇ ದಕ್ಷಿಣ ಫ್ರಾನ್ಸ್​​​​​ನ ಮಾರ್ಸೆಲ್ಲಿಸ್​​​ನಲ್ಲಿ ಮತ್ತೊಂದು ರೂಪಾಂತರಿ ವೈರಾಣು ಪತ್ತೆಯಾಗಿದೆ. ಇದನ್ನು B.1.640.2 ಅಂತ ಗುರುತಿಸಲಾಗಿದ್ದು, ಐಹೆಚ್​ಯು ಅಂತ ಹೆಸರಿಡಲಾಗಿದೆ. ಐಹೆಚ್​ಯು ಮೆಡಿಟರೇನಿ ಇನ್​​​ಫೆಕ್ಷನ್​ ಇನ್​​ಸ್ಟಿಟ್ಯೂಟ್​​ನ ತಜ್ಞರು 12 ಮಂದಿಯಲ್ಲಿ ಸೋಂಕು ಪತ್ತೆ ಹಚ್ಚಿದ್ದಾರೆ. ಸೆಂಟ್ರಲ್ ಆಫ್ರಿಕಾ ಕೆಮರೂನ್​​ಗೆ ಹೋಗಿ ಬಂದವರಲ್ಲಿ ಈ ವೈರಾಣು ಪತ್ತೆಯಾಗಿದೆ. ಆಫ್ರಿಕಾದ ಕೆಲ ದೇಶಗಳಲ್ಲಿ ಜಿನೋಮ್ ಸೀಕ್ವೆನ್ಸಿಂಗ್​​ ಸೌಲಭ್ಯ ಇರೋದಿಲ್ಲ. ಹೀಗಾಗಿ ಅಭಿವೃದ್ಧಿ ಹೊಂದಿದ ದೇಶಗಳು ಅಲ್ಲಿಗೆ ಹೋಗಿ ಬಂದಾಗ ಕೊರೋನಾ ಬಂದು ಜಿನೋಮ್ ಸೀಕ್ವೆನ್ಸಿಂಗ್ ನಡೆಸಿದಾಗ ಹೊಸ ವೈರಾಣು ಬೆಳಕಿಗೆ ಬರುತ್ತೆ. ಇದು ಎಷ್ಟರ ಮಟ್ಟಿಗೆ ಸೋಂಕು ಅಪಾಯಕಾರಿ..? ಇದ್ರ ಮುಂದೆ ಲಸಿಕೆ ಪರಿಣಾಮಕಾರಿನಾ ಅನ್ನೋದು ಈಗಲೇ ಹೇಳಲು ಸಾಧ್ಯವಿಲ್ಲ ಅಂತ ತಜ್ಞರು ಎಚ್ಚರಿಸಿದ್ದಾರೆ. ಆದ್ರೆ ಐಹೆಚ್​ಯು ಒಮೈಕ್ರಾನ್​ಗಿಂತಲೂ ಹೆಚ್ಚು ಅಂದ್ರೆ 46 ರೂಪಾಂತರಗಳನ್ನು ಹೊಂದಿದೆ. ಒಮೈಕ್ರಾನ್​ಗಿಂತಲೂ ವೇಗವಾಗಿ ಹರಡೋ ಸಾಮರ್ಥ್ಯ ಹೊಂದಿದೆ ಅಂತ ಹೇಳಲಾಗ್ತಿದೆ. ಸಾಮಾನ್ಯವಾಗಿ ಗ್ರೀಕ್ ಆಲ್ಫಾಬೆಟ್​ಗೆ ಅನುಗುಣವಾಗಿ ಹೆಸರು ನೀಡಲಾಗುತ್ತೆ. ಅದ್ರೆ ಸದ್ಯ ಇದನ್ನು ಪತ್ತೆಹಚ್ಚಿದ್ದು ಐಹೆಚ್​​ಯು ಮೆಡಿಟರೇನಿ ಇನ್​​ಫೆಕ್ಷನ್ ಇನ್​ಸ್ಟಿಟ್ಯೂಟ್​ ಆದ್ದರಿಂದ ಇದಕ್ಕೆ ಅದ್ರ ಹೆಸರೇ ಇಡಲಾಗಿದೆ. ಈವರೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಐಹೆಚ್​​ಯು ಚಿಂತೆಯ ವಿಷ್ಯ ಅಂತ ಅನೌನ್ಸ್ ಆಗಿಲ್ಲ. ಈಗಷ್ಟೇ ಪತ್ತೆಯಾಗಿರೋದ್ರಿಂದ ವಿಶ್ವದೆಲ್ಲೆಡೆ ಈ ಬಗ್ಗೆ ಪರೀಕ್ಷೆ ನಡೆಸಲಾಗುತ್ತೆ. ಅದನ್ನ ವೇರಿಯಂಟ್ ಅಂಡರ್ ಇನ್ವೆಸ್ಟಿಗೇಷನ್ ಅಂತ ಹೇಳಲಾಗುತ್ತೆ. ನಂತರ ಈ ರೂಪಾಂತರಿ ಜೋರಿದೆ ಅಂತ ಗೊತ್ತಾದ್ರೆ ಅದನ್ನ ವೇರಿಯಂಟ್ ಆಫ್ ಕನ್ಸರ್ನ್​ ಅಂತ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸುತ್ತೆ. ಇದಾದ ಬಳಿಕ ಇದಕ್ಕೆ ಗ್ರೀಕ್ ಅಲ್ಫಾಬೆಟ್ ಪ್ರಕಾರ ಹೆಸರಿಡಲಾಗುತ್ತೆ. ಅದ್ರ ಪ್ರಕಾರ ಒಮೈಕ್ರಾನ್ ಆದ್ಮೇಲೆ ಪೈ ಅಂತ ಹೆಸರು ಬರುತ್ತೆ. ಹೊಸ ವೈರಾಣು ಐಹೆಚ್​ಯುಗೆ ಪೈ ಅಂತ ಹೆಸರಿಡೋ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply