ಹೊಸದಾಗಿ ಚುನಾಯಿಸಲ್ಪಟ್ಟ ಸಂಜಯ್‌ ಸಿಂಗ್‌ರ WFI ಸಮಿತಿ ಅಮಾನತು!

masthmagaa.com:

ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ಕುಸ್ತಿ ಪಟುಗಳ ನಡುವಿನ ವಿವಾದದ ಮಧ್ಯೆ ಕ್ರೀಡಾ ಸಚಿವಾಲಯ ಮಹತ್ವದ ನಿರ್ಧಾರವೊಂದನ್ನ ಘೋಷಿಸಿದೆ. ಭಾರತೀಯ ವ್ರೆಸ್ಟ್ಲಿಂಗ್‌ ಫೆಡೆರೇಷನ್‌ (WFI) ಸಂಸ್ಥೆಯಲ್ಲಿ ಹೊಸದಾಗಿ ಚುನಾಯಿತವಾಗಿದ್ದ ಸಂಜಯ್‌ ಸಿಂಗ್‌ ನೇತೃತ್ವದ ಸಮಿತಿಯನ್ನ ಸಚಿವಾಲಯ ಅಮಾನತುಗೊಳಿಸಿದೆ. ಚುನಾಯಿತ ಸದಸ್ಯರು ಒಕ್ಕೂಟದ ಕೆಲವು ನೀತಿ, ನಿಯಮಗಳನ್ನ ನಿರ್ಲ್ಯಕ್ಷ ಮಾಡಿದ್ದಾರೆ. ಅಲ್ಲದೆ ಆತುರಾತುರವಾಗಿ ಈ ಸಮಿತಿ ಅಂಡರ್-15‌ ಹಾಗೂ ಅಂಡರ್‌-20 ನ್ಯಾಷನಲ್‌ ಲೆವೆಲ್‌ ಕ್ರೀಡಾಕೂಟವನ್ನ ಘೋಷಿಸಿದೆ. ಘೋಷಣೆಗೆ ಮುಂಚೆ ಕುಸ್ತಿಪಟುಗಳಿಗೆ ಯಾವುದೇ ನೊಟೀಸ್‌ ನೀಡಿಲ್ಲ. ಹೀಗಾಗಿ ಸಮಿತಿಯನ್ನ ಅಮಾನತು ಮಾಡಲಾಗಿದೆʼ ಅಂತ ಸಚಿವಾಲಯ ತಿಳಿಸಿದೆ. ಈ ಬೆನ್ನಲ್ಲೇ ಬಿಜೆಪಿ ಪ್ರೆಸಿಡೆಂಟ್‌ ಜೆಪಿ ನಡ್ಡಾ ಜೊತೆ ಸಂಸದ ಬ್ರಿಜ್‌ ಭೂಷನ್‌ ಸಿಂಗ್‌ ಮೀಟಿಂಗ್‌ ನಡೆಸಿದ್ರು. ಆದ್ರೆ ಕುಸ್ತಿ ಬಗ್ಗೆ ರಿಪ್ಲೈ ನೀಡಲು ನಿರಾಕರಿಸಿರೋ ಬ್ರಿಜ್‌ ಭೂಷಣ್‌ ಸಿಂಗ್‌, ʻನಾನು ಕುಸ್ತಿ ವಿಚಾರದಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದೇನೆ. ನಡ್ಡಾ ಅವರನ್ನ ಮೀಟ್‌ ಮಾಡಿದ್ದು 2024ರ ಲೋಕಸಭಾ ಚುನಾವಣೆ ವಿಚಾರ ಮಾತನಾಡೋಕೆ ಅಂದಿದ್ದಾರೆ. ಇತ್ತ WFI ಚುನಾಯಿತ ಸಮಿತಿ ಸಸ್ಪೆಂಡ್‌ ಆಗುತ್ತಲೇ ಮಾತನಾಡಿರೋ ಕುಸ್ತಿ ಪಟು ವಿನೇಶ್‌ ಪೋಗಟ್‌ ʻನಾವು ಸೋಲೊಪ್ಪಿಕೊಂಡಿದ್ರೆ ಜಗತ್ತಿನಲ್ಲಿ ಮಹಿಳಾ ಕ್ರೀಡಾ ಪಟುಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತೋಕು ಮುಂಚೆ ಯೋಚನೆ ಮಾಡೋ ಪರಿಸ್ಥಿತಿ ಬರ್ತಿತ್ತು. WFI ನಲ್ಲಿ ಕ್ರೀಡಾಪಟುಗಳಿಗೆ, ಅದ್ರಲ್ಲೂ ಮಹಿಳೆಯರಿಗಾಗಿ ಒಳ್ಳೇ ಕೆಲಸ ಮಾಡೋ ವ್ಯಕ್ತಿಗಳು ಇರ್ಬೇಕುʼ ಅಂದಿದ್ದಾರೆ. ಇನ್ನು ಸರ್ಕಾರದ ಈ ನಡೆಯನ್ನ ಸ್ವಾಗತಿಸಿರೋ ಕುಸ್ತಿ ಪಟು ಭಜರಂಗ್‌ ಪೂನಿಯ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನ ವಾಪಸ್‌ ಪಡೆಯೋಕೆ ರೆಡಿ ಇದೀನಿ ಅಂದಿದ್ದಾರೆ.

-masthmagaa.com

Contact Us for Advertisement

Leave a Reply