ಗೋವಾದಲ್ಲಿ ಕೊರೋನಾ ಅಟ್ಟಹಾಸ! ವಿಡಿಯೋ ವೈರಲ್

masthmagaa.com:

ಗೋವಾದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ. ಒಂದೇ ದಿನ 388 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದ್ದು, ಪಾಸಿಟಿವಿಟಿ ದರ 10 ಪರ್ಸೆಂಟ್​​ಗೆ ಏರಿಕೆಯಾಗಿದೆ. ಪ್ರವಾಸಿಗರ ತಾಣವಾದ ಗೋವಾಗೆ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಕ್ರಿಸ್​​ಮಸ್ ಮತ್ತು ಹೊಸ ವರ್ಷದ ಅಂಗವಾಗಿ ದೊಡ್ಡಮಟ್ಟದಲ್ಲಿ ಪ್ರವಾಸಿಗರು ಬಂದಿದ್ರು. ಇದೇ ಕಾರಣದಿಂದ ಕೊರೋನಾ ಜಾಸ್ತಿಯಾಗಿರಬಹುದು ಅಂತ ಅಂದಾಜಿಸಲಾಗಿದೆ. ಇದ್ರ ಬೆನ್ನಲ್ಲೇ ಸರ್ಕಾರ ಕೂಡ ನೈಟ್ ಕರ್ಫ್ಯೂ ಸೇರಿದಂತೆ ಕೊರೋನಾ ತಡೆಗೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಿದೆ.

ಇದ್ರ ನಡುವೆಯೇ ಉತ್ತರ ಗೋವಾದ ಬಗಾ ಬೀಚ್​​ ಹತ್ತಿರದ ರಸ್ತೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದ್ರಲ್ಲಿ ರಸ್ತೆಯೇ ಕಾಣದಷ್ಟು ಪ್ರಮಾಣದಲ್ಲಿ ಪ್ರವಾಸಿಗರು ಓಡಾಡ್ತಿರೋದನ್ನು ಕಾಣಬಹುದಾಗಿದೆ. ಪ್ರವಾಸಿಗರಿಂದ ಕೊರೋನಾಗೆ ರಾಯಲ್ ವೆಲ್​ಕಮ್ ಅಂತ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply