ಓಪನ್‌AI, ಮೈಕ್ರೊಸಾಫ್ಟ್‌ ಮೇಲೆ ನ್ಯೂಯಾರ್ಕ್‌ ಟೈಮ್ಸ್‌ ಕೇಸ್‌!

masthmagaa.com:

AI ಕೆಲಸ ಮಾಡೋದು ಅದಕ್ಕೆ ಫೀಡ್‌ ಆಗಿರೋ ಡಾಟಾದ ಸಹಾಯದಿಂದ. AI ಕಂಪನಿಗಳು ತಮ್ಮ ಟೂಲ್‌ಗೆ ಡೆಟಾವನ್ನ ಫೀಡ್‌ ಮಾಡ್ತವೆ. ಆದ್ರೆ ಇದೇ ಡೇಟಾ ವಿಚಾರವಾಗಿ ಚಾಟ್‌GPT ಮಾತೃಸಂಸ್ಥೆ ಓಪನ್‌AI ಹಾಗೂ ಮೈಕ್ರೋಸಾಫ್ಟ್‌ ವಿರುದ್ಧ ಅಮೆರಿಕದ ಪ್ರತಿಷ್ಠಿತ ಪತ್ರಿಕೆ ನ್ಯೂಯಾರ್ಕ್‌ ಟೈಮ್ಸ್‌ ಕೇಸ್‌ ಹಾಕಿದೆ. ನಮ್ಮ ಪರ್ಮಿಶನ್‌ ಇಲ್ಲದೆ ಈ ಕಂಪನಿಗಳು ನಮ್ಮ ಲಕ್ಷಾಂತರ ಆರ್ಟಿಕಲ್‌ಗಳನ್ನ AI ಟ್ರೇನಿಂಗ್‌ಗೆ ಬಳಸಿಕೊಂಡಿವೆ ಅಂತ ಕೇಸ್‌ ಹಾಕಿದೆ. ಅಲ್ಲದೆ ತಮ್ಮ ಕಂಟೆಂಟನ್ನ ಈ ಕಂಪನಿಗಳು ಬಳಸಿಕೊಳ್ಳದಂತೆ ಕೂಡಲೇ ಆರ್ಡರ್‌ ಪಾಸ್‌ ಮಾಡ್ಬೇಕು ಅಂತ ಟೈಮ್ಸ್‌ ಆಗ್ರಿಹಿಸಿದೆ. ಈ ಬಗ್ಗೆ ಮೈಕ್ರೊಸಾಫ್ಟ್‌ ಆಗ್ಲಿ ಓಪನ್‌AI ಆಗ್ಲಿ ಸಧ್ಯಕ್ಕೆ ರಿಪ್ಲೈ ನೀಡಿಲ್ಲ.

-masthmagaa.com

Contact Us for Advertisement

Leave a Reply