ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಗುಡ್​​ಬೈ ಹೇಳಿದ ಸ್ಟಾರ್ ಬ್ಯಾಟ್ಸ್​ಮನ್​ ಟೇಲರ್

masthmagaa.com:

ನ್ಯೂಜಿಲೆಂಡ್ ಸ್ಟಾರ್ ಬ್ಯಾಟ್ಸ್ ಮನ್ ರಾಸ್ ಟೇಲರ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಇವರಿಗೆ ಈಗ 37 ವರ್ಷ. ಬಾಂಗ್ಲಾದೇಶ ವಿರುದ್ಧದ 2 ಟೆಸ್ಟ್ ಗಳ ಸರಣಿ ಹಾಗೂ ಆಸ್ಟ್ರೇಲಿಯಾ, ನೆದರ್ಲ್ಯಾಂಡ್ ವಿರುದ್ಧದ ಏಕದಿನ ಸರಣಿಯೇ ಕೊನೆಯ ಆಟ ಅಂತ ಅನೌನ್ಸ್ ಮಾಡಿದ್ದಾರೆ. 17 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ರಾಸ್ ಟೇಲರ್ ನ್ಯೂಜಲೆಂಡ್ ಪರ 110 ಟೆಸ್ಟ್, 233 ODI, 102 T20I ಹಾಗೂ 55 ಐಪಿಎಲ್ ಮ್ಯಾಚಸ್ ಆಡಿದ್ದಾರೆ. ಕೆಲ ಕಾಲ ಕ್ಯಾಪ್ಟನ್ ಆಗಿಯೂ ಆಡಿದ್ದಾರೆ. ಆದ್ರೆ ಇವ್ರು ತಮ್ಮ ಸ್ಫೋಟಕ ಬ್ಯಾಟಿಂಗಿಗೆ ಜಾಸ್ತಿ ಫೇಮಸ್. ಅದರಲ್ಲೂ ಲೆಫ್ಟ್ ಸೈಡ್ ನಲ್ಲಿ ಸ್ಟ್ರಾಂಗ್ ಇದ್ದ ರಾಸ್ ಟೇಲರ್ IPL ನಲ್ಲಿ RCB, RR, DD, PW ತಂಡಗಳ ಪರವಾಗಿ ಸಿಡಿಲಬ್ಬರ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈಗ ಅವ್ರು ಇಂಟರ್ನ್ಯಾಶನಲ್ ಕ್ರಿಕೆಟ್ ಗೆ ವಿದಾಯ ಅಂತ ಹೇಳಿದ್ದಾರೆ. ಆದ್ರೆ IPL ನಂತ ಲೀಗ್ ಗಳಲ್ಲಿ ಆಡ್ತಾರೋ ಇಲ್ವೋ ಸ್ಪಷ್ಟ ಇಲ್ಲ. ಇವರಿಗೆ ಒಂದುವೇಳೆ ಆಸಕ್ತಿ ಇದ್ದರೂ ವಯಸ್ಸು 37 ಆಗಿದೆ. ಸೋ ಆಯ್ಕೆಯಾಗೋದು, ಆಡೋದು ಕಷ್ಟಾನೆ.

-masthmagaa.com

Contact Us for Advertisement

Leave a Reply