ಟೆಸ್ಟ್​ ವಿಶ್ವಕಪ್​ ಫೈನಲ್​​ಗೆ ನ್ಯೂಜಿಲ್ಯಾಂಡ್​ ಎಂಟ್ರಿ.. ಭಾರತಕ್ಕೂ ಇದೆ ಚಾನ್ಸ್

masthmagaa.com:

ಕೊರೋನಾ ಹಾವಳಿಯಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಆಸ್ಟ್ರೇಲಿಯಾ ತಂಡ ಹಿಂದಕ್ಕೆ ಸರಿದಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ತಿಂಗಳಾಂತ್ಯಕ್ಕೆ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ನಡುವೆ 3 ಪಂದ್ಯಗಳ ಟೆಸ್ಟ್​ ಸರಣಿ ನಡೀಬೇಕಿತ್ತು. ಇದೀಗ ಆಸ್ಟ್ರೇಲಿಯಾ ತಂಡ ಹಿಂದಕ್ಕೆ ಹೆಜ್ಜೆ ಇಟ್ಟಿರೋದ್ರಿಂದ ಲಾರ್ಡ್ಸ್​​ ಗ್ರೌಂಡ್​ನಲ್ಲಿ ನಡೆಯಲಿರೋ ವರ್ಲ್ಡ್​ ಟೆಸ್ಟ್​ ಚಾಂಪಿಯನ್​​ಶಿಪ್​ನ ಫೈನಲ್​ ಪಂದ್ಯಕ್ಕೆ ನ್ಯೂಜಿಲೆಂಡ್ ಆಯ್ಕೆಯಾಗಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಟೀಂ ಇಂಡಿಯಾ ಮೊದಲ ಸ್ಥಾನದಲ್ಲಿದ್ರೂ ಫೈನಲ್​ ಮ್ಯಾಚ್​​ನ ಸ್ಥಾನ ಇನ್ನೂ ಪಕ್ಕಾ ಆಗಿಲ್ಲ. ಯಾಕಂದ್ರೆ ಭಾರತ-ಇಂಗ್ಲೆಂಡ್​ ನಡುವೆ ನಾಡಿದ್ದಿಂದ ಟೆಸ್ಟ್​ ಸರಣಿ ಆರಂಭವಾಗಲಿದೆ. ಅದರ ರಿಸಲ್ಟ್ ಮೇಲೆ ಭಾರತ ಮತ್ತು ಇಂಗ್ಲೆಂಡ್​ ಭವಿಷ್ಯ ನಿರ್ಧಾರವಾಗಲಿದೆ. 3ನೇ ಸ್ಥಾನದಲ್ಲಿರೋ ಆಸ್ಟ್ರೇಲಿಯಾಗೆ ಚಾನ್ಸ್​ ಇದ್ರೂ ಈಗ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂದೆ ಸರಿದಿರೋದ್ರಿಂದ ಭಾರತ-ಇಂಗ್ಲೆಂಡ್​ ಟೆಸ್ಟ್​ ಸರಣಿಯ ರಿಸಲ್ಟ್ ಮೇಲೆ ಆಸ್ಟ್ರೇಲಿಯಾ ಭವಿಷ್ಯ ಕೂಡ ನಿಂತಿದೆ.

ಭಾರತ-ಇಂಗ್ಲೆಂಡ್​-ಆಸ್ಟ್ರೇಲಿಯಾ ಲೆಕ್ಕಾಚಾರ ಹೀಗಿದೆ:

ಭಾರತ-ಇಂಗ್ಲೆಂಡ್​ ಟೆಸ್ಟ್​ ಸರಣಿಯನ್ನ ಭಾರತವು 2-0, 2-1, 3-0, 3-1, 4-0ಯಿಂದ ವಶಪಡಿಸಿಕೊಂಡ್ರೆ ಟೆಸ್ಟ್​ ವರ್ಲ್ಡ್​​ಕಪ್​ನ ಫೈನಲ್​ಗೆ ಭಾರತ ಕ್ವಾಲಿಫೈ ಆಗಲಿದೆ.

ಭಾರತ-ಇಂಗ್ಲೆಂಡ್​ ಟೆಸ್ಟ್​ ಸರಣಿಯನ್ನ ಇಂಗ್ಲೆಂಡ್​ 3-0, 3-1, 4-0ಯಿಂದ ಗೆದ್ರೆ ಟೆಸ್ಟ್​ ವರ್ಲ್ಡ್​​ಕಪ್​ನ ಫೈನಲ್​ಗೆ ಇಂಗ್ಲೆಂಡ್​ ಕ್ವಾಲಿಫೈ ಆಗಲಿದೆ.

ಭಾರತ-ಇಂಗ್ಲೆಂಡ್​ ಟೆಸ್ಟ್​ ಸರಣಿಯನ್ನ ಭಾರತವು 1-0ಯಿಂದ ಗೆದ್ರೆ ಅಥವಾ ಇಂಗ್ಲೆಂಡ್ 1-0, 2-0, 2-1ಯಿಂದ ಗೆದ್ರೆ ಅಥವಾ ಸರಣಿಯು 0-0, 1-1, 2-2ರಲ್ಲಿ ಸಮಬಲ ಕಂಡರೆ ಆಸ್ಟ್ರೇಲಿಯಾ ತಂಡ ಫೈನಲ್​ಗೆ ಕ್ವಾಲಿಫೈ ಆಗಲಿದೆ.

-masthmagaa.com

Contact Us for Advertisement

Leave a Reply