ಅಯೋಧ್ಯೆಯಲ್ಲಿ ನೂತನ 68 ಕಿಮೀ ಬೈಪಾಸ್‌ ಯೋಜನೆಗೆ ಸಜ್ಜು!

masthmagaa.com:

ಶ್ರೀರಾಮಮಂದಿರ ಉದ್ಘಾಟನೆಗೊಂಡು ಸಾರ್ವಜನಿಕರಿಗೆ ಓಪನ್‌ ಆದ ಬೆನ್ನಲ್ಲೇ ಇದೀಗ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಯೋಧ್ಯೆಯಲ್ಲಿ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಅಯೋಧ್ಯೆ ಸುತ್ತಮುತ್ತಲ ಪ್ರದೇಶದಲ್ಲಿ ವಾಹನಗಳ ಸುಲಭ ಸಂಚಾರಕ್ಕಾಗಿ 68 ಕಿಮೀ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಕೇಂದ್ರದಿಂದ ಒಪ್ಪಿಗೆ ಸೂಚಿಸೋಕೆ ಕೇಳಿದೆ. ಸುಮಾರು 3,570 ಕೋಟಿ ರೂಪಾಯಿ ವೆಚ್ಚದಲ್ಲಿ 4/6 ಲೇನ್‌ಗಳ ಗ್ರೀನ್‌ಫೀಲ್ಡ್‌ ಬೈಪಾಸ್‌ ನಿರ್ಮಾಣ ಮಾಡೋಕೆ NHAI ಪ್ಲಾನ್‌ ಹಾಕೊಂಡಿದೆ. ಇದಕ್ಕಾಗಿ ಬಿಡ್‌ಗೆ ಇನ್ವೈಟ್‌ ಕೂಡ ಮಾಡಿದೆ. ಅಯೋಧ್ಯೆಯಲ್ಲಿ ಇನ್ಮುಂದೆ ವಾಹನ ಸಂಚಾರ ಹೆಚ್ಚಾಗೋ ಸಾಧ್ಯತೆ ಇದೆ ಅಂತ ಈ ಹೊಸ ಪ್ರಾಜೆಕ್ಟ್‌ಗೆ ಕೈ ಹಾಕಲಾಗಿದೆ.

-masthmagaa.com

Contact Us for Advertisement

Leave a Reply