ಮಾನವ ಕಳ್ಳಸಾಗಾಣಿಕೆ ಜಾಲ: ದೇಶಾದ್ಯಂತ ರೇಡ್‌ ನಡೆಸಿದ NIA

masthmagaa.com:

ಮಾನವ ಕಳ್ಳಸಾಗಾಣಿಕೆ(ಹ್ಯುಮನ್‌ ಟ್ರಾಫಿಕಿಂಗ್)‌ ಕೇಸ್‌ಗಳು ಹೆಚ್ಚಾಗ್ತಿರೊ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ(NIA) ಇಂದು ಹಲವು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ರೇಡ್‌ ನಡೆಸಿದೆ. ಕರ್ನಾಟಕ, ತಮಿಳುನಾಡು, ಪುದುಚೆರಿ, ಜಮ್ಮು ಕಾಶ್ಮೀರ ಸೇರಿದಂತೆ 8 ರಾಜ್ಯ, 2 ಯುನಿಯನ್‌ ಟೆರಿಟರಿಗಳಲ್ಲಿ NIAನ anti-human trafficking probe unit ದಾಳಿ ನಡೆಸಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.‌ ಕಳೆದ ವರ್ಷ ಸಹ‌ ಕೆಲವು ರೊಹಿಂಗ್ಯಾ ಹಾಗೂ ಬಾಂಗ್ಲಾದೇಶಿ ಮುಸ್ಲೀಮರನ್ನ ಭಾರತಕ್ಕೆ ಸಾಗಾಣೆ ಮಾಡಿದ್ದರ ಕುರಿತು ಈ ಯುನಿಟ್ ತನಿಖೆ ಮಾಡಿತ್ತು. ಸೆಪ್ಟೆಂಬರ್‌ನಲ್ಲು ತಮಿಳುನಾಡಿನಲ್ಲಿ ಕೆಲವು ಲಂಕಾ ಪ್ರಜೆಗಳನ್ನ ಮೊಹಮದ್‌ ಇಮ್ರಾನ್‌ ಖಾನ್‌ ಎಂಬುವವನು ಅಕ್ರಮವಾಗಿ ತನ್ನ ಬಳಿ ಇರಿಸಿಕೊಂಡು NIA ಬಲೆಗೆ ಬಿದ್ದಿದ್ದ. ಇಂದು ನಡೆದ ರೇಡ್‌ಗೂ ಈ ಕೇಸ್‌ಗೂ ಸಂಬಂಧ ಇರೋದಾಗಿ ಶಂಕಿಸಲಾಗಿದೆ. ಆದ್ರೆ ಈ ಬಗ್ಗೆ ಅಧಿಕಾರಿಗಳು ಯಾವುದೇ ಹೇಳಿಕೆ ನೀಡಿಲ್ಲ.

-masthmagaa.com

Contact Us for Advertisement

Leave a Reply