ಸಚಿನ್‌ ವಾಜೆಗೆ ಪಿಪಿಇ ಕಿಟ್‌ ಹಾಕಿ ಸೀನ್‌ ರೀ ಕ್ರಿಯೇಟ್!

masthmagaa.com:

ರಿಲಾಯನ್ಸ್​ನ ಮುಖೇಶ್ ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ ಕಾರು ಪತ್ತೆಯಾದ ಕೇಸ್ ತನಿಖೆ ಚುರುಕುಗೊಂಡಿದೆ. ಕಾರು ಪತ್ತೆಯಾದ ಸ್ಥಳದಲ್ಲಿ ವ್ಯಕ್ತಿಯೊಬ್ಬ ದೊಗಲೆ ಪ್ಯಾಂಟ್ ಶರ್ಟ್​ ಧರಿಸಿ ಓಡಾಡ್ತಿರೋದು ಸಿಸಿವಿಟಿಯಲ್ಲಿ ಸೆರೆಯಾಗಿತ್ತು. ಅದು ಸಸ್ಪೆಂಡೆಡ್​​ ಪೊಲೀಸ್ ಅಧಿಕಾರಿ ಸಚಿನ್ ವಾಜೆಯೇ ಇರಬೇಕು ಅಂತ ಎನ್​ಐಎ ಅಧಿಕಾರಿಗಳಿಗೆ ಡೌಟ್ ಬಂದಿತ್ತು, ಹೀಗಾಗಿ ನಿನ್ನೆ ರಾತ್ರಿ ಸಚಿನ್ ವಾಜೆಯನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿ ದೊಗಲೆ ದೊಗಲೆ ಇರುವ ಪಿಪಿಇ ಕಿಟ್ ಧರಿಸಿ, ತಲೆಗೆ ಕರ್ಚೀಫ್ ಕಟ್ಟಿ ನಡೆದಾಡುವಂತೆ ಸೂಚಿಸಿಲಾಗಿದೆ.

ಈ ಮೂಲಕ ಸೀನ್ ರೀಕ್ರಿಯೇಟ್ ಮಾಡಿದ್ದಾರೆ. ಇನ್ನು ಇದೇ ಕೇಸ್​ಗೆ ನೇರ ಸಂಬಂಧ ಹೊಂದಿರೋ, ಸ್ಕಾರ್ಪಿಯೋ ಕಾರು ಮಾಲೀಕ ಮನ್​​ಸುಖ್ ಹಿರೇನ್ ನಿಗೂಢ ಸಾವು ಪ್ರಕರಣವನ್ನ ಕೂಡ ಎಟಿಎಸ್​​ನಿಂದ ಎನ್​ಐಗೆ ಹಸ್ತಾಂತರ ಮಾಡಲಾಗಿದೆ. ಇನ್ನು ಈ ಕೇಸ್​​ನಲ್ಲಿ ಏನೇನ್ ಟ್ವಿಸ್ಟ್ ಬರುತ್ತೋ ಗೊತ್ತಿಲ್ಲ.

-masthmagaa.com

Contact Us for Advertisement

Leave a Reply