ಐಸಿಸ್‌ ಜೊತೆಗೆ ಲಿಂಕ್‌ : ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ INA ದಾಳಿ!

masthmgaa.com:

ISIS ಉಗ್ರ ಸಂಘಟನೆ ಜೊತೆಗೆ ಲಿಂಕ್‌ ಹೊಂದಿರೋ ಶಂಕೆಯ ಮೇರೆಗೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಹಲವು ಸ್ಥಳಗಳಲ್ಲಿ ರಾಷ್ಟ್ರೀಯ ಭದ್ರತಾ ಸಂಸ್ಥೆ (NIA) ದಾಳಿ ಮಾಡಿದೆ. ಸುಮಾರು 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ದಾಳಿ ನಡೆಸಿದ್ದು 15ಜನರನ್ನ NIA ಅರೆಸ್ಟ್‌ ಮಾಡಿದೆ. ಮಹಾರಾಷ್ಟ್ರದ ಥಾಣೆ, ಪುಣೆ, ಮಿರಾ ಭಯಾಂದರ್ ನಗರಗಳಲ್ಲಿ NIA ದಾಳಿ ಮಾಡಿದೆ. ಬೆಂಗಳೂರಿನ ಪುಲಕೇಶಿ ನಗರದ ನಿವಾಸಿಯೊಬ್ಬನನ್ನ ಈ ಸಂಬಂಧ ಬಂಧಿಸಲಾಗಿದೆ ಎನ್ನಲಾಗಿದೆ.
ಅಂದ್ಹಾಗೆ ಭಾರತದಲ್ಲಿ ಉಗ್ರರ ಸಿದ್ದಾಂತಗಳನ್ನ ಹರಡಿಸಲು ಬಂಧಿತ ಆರೋಪಿಗಳು ಪ್ಲ್ಯಾನ್‌ ಮಾಡಿದ್ದು, ಉಗ್ರರ ಟ್ರೈನಿಂಗ್ ಸೆಂಟರ್‌ಗಳನ್ನ ಆರಂಭಿಸೊಕ್ಕೆ ಪುಣೆ ಬಳಿ ಬಾಂಬ್‌ ಸ್ಫೋಟಕಗಳ ಬಳಸುವ ಬಗ್ಗೆ ತಾಲಿಮು ನಡೆಸುತ್ತಿದ್ರು ಅಂತ ಗೊತ್ತಾಗಿದೆ. ಬಂದೂಕುಗಳನ್ನ ನೀಡುವ ಮೂಲಕ ಉಗ್ರರಿಗೆ ಆಶ್ರಯ ಕೊಡ್ತಾಯಿದ್ರು ಎನ್ನಲಾಗಿದೆ. ಈ ಹಿಂದೆ ಕಳೆದ ತಿಂಗಳು ಪುಣೆಯಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಇಬ್ಬರು ಈ ಕೃತ್ಯಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

-masthmagaa

Contact Us for Advertisement

Leave a Reply