4ನೇ ಸಲ ಗೆದ್ದು ಬಂದ ಈ ದೇಶದ ಅಧ್ಯಕ್ಷರ ಮೇಲೆ ಉಳಿದ ದೇಶಗಳಿಗೆ ಸಿಟ್ಟೇಕೆ?

masthmagaa.com:

ಉತ್ತರ ಅಮೆರಿಕ ಖಂಡದಲ್ಲಿ ಬರೋ ನಿಕರಾಗುವಾ ದೇಶದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡಾನಿಯಲ್​ ಒರ್ಟಿಗಾ ಗೆದ್ದಿದ್ದಾರೆ. ಈ ಮೂಲಕ ಸತತ ನಾಲ್ಕನೇ ಬಾರಿಗೆ ನಿಕರಾಗುವಾದ ಅಧ್ಯಕ್ಷರಾಗಿದ್ದಾರೆ. ಆದ್ರೆ ಈ ಚುನಾವಣೆ ವಿವಾದಗಳಿಂದಾನೇ ತುಂಬಿ ಹೋಗಿತ್ತು. ಚುನಾವಣೆಗೂ ಮುನ್ನ ಈ ಡಾನಿಯಲ್​ ಒರ್ಟಿಗಾ ತಮ್ಮ ರಾಜಕೀಯ ವಿರೋಧಿಗಳನ್ನ ಜೈಲಿಗೆ ಅಟ್ಟಿದ್ದ. ಉದ್ಯಮಿಗಳನ್ನ, ಬೇರೆ ವಿರೋಧಿಗಳನ್ನ ಅರೆಸ್ಟ್ ಮಾಡಿಸಿದ್ದ. ಅಮೆರಿಕ ಸೇರಿದಂತೆ ಬೇರೆ ದೇಶದ ಪತ್ರಕರ್ತರು ನಿಕರಾಗುವಾಕ್ಕೆ ಬರದಂತೆ ನಿರ್ಬಂಧ ವಿಧಿಸಿದ್ದ. ಹೀಗಾಗಿ ನಿಕರಾಗುವಾದ ಚುನಾವಣೆ ಬಗ್ಗೆ ಅಮೆರಿಕ ಸೇರಿದಂತೆ ಯುರೋಪಿನ ಹಲವು ದೇಶಗಳು ಕಳವಳ ವ್ಯಕ್ತಪಡಿಸಿದ್ವು. ಅಮೆರಿಕ ಅಂತೂ ನಿಕರಾಗುವಾ ಮೇಲೆ ಸ್ಯಾಂಕ್ಷನ್ಸ್ ಹೇರುವ ಬಗ್ಗೆ ಚಿಂತಿಸುತ್ತಿದ್ದೇವೆ ಅಂತ ಹೇಳಿತ್ತು. ಆದ್ರೆ ರಷ್ಯಾ, ಕ್ಯೂಬಾ, ವೆನಿಝುವೆಲಾ ಮುಂತಾದ ದೇಶಗಳು ಒರ್ಟಿಗಾಗೆ ಬೆಂಬಲ ನೀಡಿದ್ದವು. ಇದೀಗ ಚುನಾವಣೆ ಮುಗಿದು ಮತ್ತೆ ಒರ್ಟಿಗಾ ಅಧಿಕಾರಕ್ಕೆ ಬಂದಿದ್ದಾರೆ. 2007ರಿಂದ ಇವರೇ ನಿಕರಾಗುವಾದ ಅಧ್ಯಕ್ಷರಾಗಿದ್ದಾರೆ.

-masthmagaa.com

Contact Us for Advertisement

Leave a Reply