ರಾಜ್ಯದಲ್ಲಿ ಇವತ್ತಿಂದ ನೈಟ್ ಕರ್ಫ್ಯೂ! ಹೊರಗೆ ಬಂದ್ರೆ ಕಜ್ಜಾಯ ಫಿಕ್ಸ್​

masthmagaa.com:

ರಾಜ್ಯದಲ್ಲಿ ಇವತ್ತು ರಾತ್ರಿಯಿಂದ ನೈಟ್ ಕರ್ಫ್ಯೂ ಜಾರಿಗೆ ಬರ್ತಿದೆ. ರಾತ್ರಿ 10 ಗಂಟೆಯಿಂದ 5 ಗಂಟೆವರೆಗೆ ನೈಟ್​ ಕರ್ಫ್ಯೂ ಇರುತ್ತೆ. ಈ ಅವಧಿಯಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಇರುತ್ತೆ. 10 ಗಂಟೆ ನಂತ್ರ ಯಾವ್ದೇ ಕಮರ್ಷಿಯಲ್​ ಆ್ಯಕ್ಟಿವಿಟಿ ನಡೆಯೋವಂತಿಲ್ಲ. ವ್ಯಾಪಾರ ವಹಿವಾಟು, ಥಿಯೇಟರ್ ಎಲ್ಲವೂ ಬಂದ್ ಆಗಿರುತ್ತೆ. ಅನಗತ್ಯವಾಗಿ ಹೊರಗೆ ಓಡಾಡುವಂತಿಲ್ಲ. ಬಸ್​​, ಟ್ರೈನ್​ ಮತ್ತು ಏರ್​​ಪೋರ್ಟ್​ಗೆ ಹೋಗೋರು ಓಡಾಡಬಹುದು, ಆದ್ರೆ ಅದಕ್ಕೆ ಸಂಬಂಧಿಸಿದಂತೆ ಟಿಕೆಟ್​ ಇರಬೇಕು. ನೈಟ್ ಶಿಫ್ಟ್​ ಕೆಲಸ ಮಾಡೋರು ಮಾಡ್ಬೋದು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನ ತಮ್ಮ ಬಳಿ ಇಟ್ಟುಕೊಂಡಿರಬೇಕು. ಜನವರಿ ಜನವರಿ 7ನೇ ತಾರೀಖಿನವರೆಗೆ ಈ ನಿರ್ಬಂಧಗಳು ಜಾರಿಯಲ್ಲಿರುತ್ತೆ.

-masthmagaa.com

Contact Us for Advertisement

Leave a Reply