I.N.D.I.A ಒಕ್ಕೂಟಕ್ಕೆ ಗೊತ್ತು ಗುರಿ ಒಂದೂ ಇಲ್ಲ: ತಿರುಗಿ ಬಿದ್ದ ನಿತಿಶ್‌‌ ಕುಮಾರ್

masthmagaa.com:

“ವಿಪಕ್ಷಗಳ I.N.D.I.A ಒಕ್ಕೂಟಕ್ಕೆ ಗೊತ್ತು ಗುರಿ ಒಂದೂ ಇಲ್ಲ. ಏನೋ ಮಾಡೋಕೆ ಅಂತ ಅಲಯಾನ್ಸ್‌ ಮಾಡುದ್ರು. ಆದ್ರೆ ಅಲ್ಲಿ ಏನೂ ಆಗಿಲ್ಲ” ಅಂತ ಬಿಹಾರ ಸಿಎಂ ನಿತಿಶ್‌ ಕುಮಾರ್‌ ಹೇಳಿದ್ದಾರೆ. ಪಾಟ್ನಾದಲ್ಲಿ ಇಂದು ನಡೆದ ʻಬಿಜೆಪಿ ಹಟಾವೊ ದೇಶ್‌ ಬಚಾವೊʼ ರ‍್ಯಾಲಿಯಲ್ಲಿ ಮಾತನಾಡಿದ ನಿತಿಶ್‌ ಕುಮಾರ್‌ “ನಮ್ಮ ಇತಿಹಾಸವನ್ನೆ ಬದಲಿಸೋಕೆ ಹೊರಟಿರೋರಿಂದ ನಾವು ಈ ದೇಶವನ್ನ ಕಾಪಾಡೋಕೆ ಅಂತ ಎಲ್ಲರನ್ನೂ ಒಟ್ಟಾಗಿ ಸೇರಿಸಿ I.N.D.I.A ಒಕ್ಕೂಟ ರಚನೆ ಮಾಡಿದ್ವಿ. ಜೊತೆಗೆ ಕಾಂಗ್ರೆಸನ್ನ ಮುಂದೆ ತಗೊಂಡೋಗೋಕೆ ನಾವೆಲ್ಲ ಒಟ್ಟಿಗೆ ಕೆಲಸಾನೂ ಮಾಡುದ್ವಿ. ಆದ್ರೆ ಕಾಂಗೆಸ್‌ ಸದ್ಯಕ್ಕೆ ಚುನಾವಣೆ ನಡೆಯಲಿರೊ 5 ರಾಜ್ಯಗಳ ಮೇಲಷ್ಟೇ ಆಸಕ್ತಿ ಹೊಂದಿದೆ. ಅದು ಮುಗಿದ್ಮೇಲೆ ಅವರೇ ಎಲ್ಲರನ್ನು ಕರೀತಾರೆ ನೋಡ್ತಿರಿ” ಅಂದಿದ್ದಾರೆ. ಅಂದ್ಹಾಗೆ ಮಧ್ಯಪ್ರದೇಶದಲ್ಲಿ ಸೀಟ್‌ ಹಂಚಿಕೆ ವಿಚಾರವಾಗಿ ಕಾಂಗ್ರೆಸ್‌, ಸಮಾಜವಾದಿ ಪಾರ್ಟಿಗಳು ಸಾರ್ವಜನಿಕವಾಗಿ ಕಿತ್ತಾಡಿದ್ವು. ಈ ಬೆನ್ನಲ್ಲೆ ನಿತೀಶ್‌ ಕುಮಾರ್‌ ಈ ರೀತಿ ಹೇಳಿಕೆ ನೀಡಿದ್ದು, ಒಕ್ಕೂಟದಲ್ಲಿ ಒಗ್ಗಟ್ಟೇ ಇಲ್ಲ ಅನ್ನೋದನ್ನ ತೋರಿಸಿಕೊಟ್ಟಂತಾಗಿದೆ.

-masthmagaa.com

Contact Us for Advertisement

Leave a Reply