ಅಫ್ಘನಿಸ್ತಾನದಿಂದ ಜಾಗ ಖಾಲಿ ಮಾಡೋರಿಗೆ ಆಗಸ್ಟ್ 31 ಕೊನೇ ದಿನ​!

masthmagaa.com:

ಅಫ್ಘನಿಸ್ತಾನದಿಂದ ಸ್ಥಳಾಂತರ ಆಗ್ಬೇಕು ಅಂತಿರೋ ವಿದೇಶಿ ಪ್ರಜೆಗಳು ಆಗಸ್ಟ್ 31ರ ಡೆಡ್​​ಲೈನ್​ ಒಳಗೆ ಸ್ಥಳಾಂತರ ಆಗ್ಬೇಕು. ಸದ್ಯಕ್ಕೆ ಈ ಡೆಡ್​​ಲೈನ್ ವಿಸ್ತರಿಸುವ ಉದ್ದೇಶ ಇಲ್ಲ ಅಂತ ತಾಲಿಬಾನ್ ವಕ್ತಾರ ಝೈಬುಲ್ಲಾ ಮುಜಾಹಿದ್​ ಹೇಳಿದ್ಧಾರೆ. ಅಲ್ಲದೆ, ಅಫ್ಘನ್ನರು ದೇಶದಿಂದ ಹೊರಹೋಗಬಾರದು. ಕಾಬೂಲ್​ ಏರ್​ಪೋರ್ಟ್​ನಲ್ಲಿರೋ ಅಫ್ಘನ್​ ಪ್ರಜೆಗಳು ತಮ್ಮ ತಮ್ಮ ಮನೆಗೆ ಹೋಗಬೇಕು. ಅಮೆರಿಕ ಕೂಡ ಅಫ್ಘನ್ನರನ್ನ, ಅಫ್ಘನ್​​ನ ಗಣ್ಯ ಮತ್ತು ಕೌಶಲ್ಯಭರಿತ ವ್ಯಕ್ತಿಗಳನ್ನ ಸ್ಥಳಾಂತರ ಮಾಡೋಕೆ ಉತ್ತೇಜನ ನೀಡಬಾರ್ದು. ಮಹಿಳೆಯರು ಕೆಲಸಕ್ಕೆ ಹೋಗೋದನ್ನ ನಾವು ಶಾಶ್ವತವಾಗಿ ಬ್ಯಾನ್ ಮಾಡೋದಿಲ್ಲ. ಆದ್ರೆ ಮಹಿಳೆಯರು ಯಾವ ರೀತಿ ಕೆಲಸಕ್ಕೆ ಮರಳಬೇಕು ಅನ್ನೋದಕ್ಕೆ ಸಂಬಂಧಿಸಿದಂತೆ ನಿಯಮಗಳನ್ನ ರೂಪಿಸಲಾಗ್ತಿದೆ. ಅದು ರೆಡಿಯಾದ ಮೇಲೆ ಮಹಿಳೆಯರು ಕೆಲಸಕ್ಕೆ ವಾಪಸ್ ಆಗಬಹುದು. ಶಾಲೆ, ಕಾಲೇಜು, ಮದರಸಾ, ಆಸ್ಪತ್ರೆಗಳು, ಸ್ಥಳೀಯ ಸರ್ಕಾರ, ಟಿವಿ, ರೇಡಿಯೋ ಸ್ಟೇಷನ್​ಗಳು ಮತ್ತೆ ಕಾರ್ಯನಿರ್ವಹಿಸಲಿವೆ. ಬೇರೆ ದೇಶದ ರಾಯಭಾರ ಕಚೇರಿಗಳಿಗೆ ನಾವು ಭದ್ರತೆ ಕೊಡ್ತೀವಿ, ಹೀಗಾಗಿ ರಾಯಭಾರ ಕಚೇರಿಗಳನ್ನ ಮುಚ್ಚಬೇಡಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply