ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ! ನಾಳೆ ನಾಡಿದ್ದು ಏನಿರುತ್ತೆ? ಏನಿರಲ್ಲ?

masthmagaa.com:

ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಜಾಸ್ತಿಯಾಗ್ತಿದ್ದು, ಇವತ್ತು 8,449 ಮಂದಿಗೆ ಸೋಂಕು ಪತ್ತೆಯಾಗಿದೆ. ಪಾಸಿಟಿವಿಟಿ ದರ ಕೂಡ 4.15ಕ್ಕೆ ಏರಿಕೆಯಾಗಿದೆ. ಬೆಂಗಳೂರು ಒಂದ್ರಲ್ಲೇ 6812 ಪ್ರಕರಣಗಳು ಪತ್ತೆಯಾಗಿವೆ.. ಇದ್ರ ನಡುವೆಯೇ ನಾಳೆಯಿಂದ ವೀಕೆಂಡ್​ ಕರ್ಫ್ಯೂ ಜಾರಿಗೆ ಬರ್ತಿದೆ. ಇವತ್ತು ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಇಡೀ ಕರ್ನಾಟಕ ಬಹುತೇಕ ಬಂದ್​ ಆಗಲಿದೆ. ರಾಜ್ಯ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಯಲ್ಲಿ ವೀಕೆಂಡ್​ ಕರ್ಫ್ಯೂ ಶುಕ್ರವಾರ ರಾತ್ರಿ 8 ಗಂಟೆಯಿಂದ ಶುರುವಾಗುತ್ತೆ ಅಂತಿತ್ತು. ಆದ್ರಿದು ಟೈಪಿಂಗ್​ ಎರರ್ ಆಗಿದೆ, ರಾತ್ರಿ 10 ಗಂಟೆಯಿಂದಲೇ ವೀಕೆಂಡ್​ ಕರ್ಫ್ಯೂ ಅಂತ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗಿದ್ರೆ ಶನಿವಾರ ಮತ್ತು ಭಾನುವಾರ ವೀಕೆಂಡ್​ ಕರ್ಫ್ಯೂ ಸಂದರ್ಭದಲ್ಲಿ ಏನೆಲ್ಲಾ ಬಂದ್ ಇರುತ್ತೆ, ಏನೆಲ್ಲಾ ಓಪನ್​ ಇರುತ್ತೆ ಅನ್ನೋದನ್ನ ನೋಡೋದಾದ್ರೆ.

ಇರಲ್ಲ (ಸೀಲ್)
– ಶಾಲಾ, ಕಾಲೇಜು
– ಮದ್ಯ ಮಾರಾಟ
– ಮಾಲ್​​
– ಥೀಯೇಟರ್​
– ಪಬ್​
– ಜಿಮ್​
– ಸ್ವಿಮ್ಮಿಂಗ್ ಪೂಲ್
– ಪಾರ್ಕ್​
– ಸಲೂನ್
– ಬ್ಯೂಟಿ ಪಾರ್ಲರ್
– ಧಾರ್ಮಿಕ ಕೇಂದ್ರಗಳು
– ಹೋಟೆಲ್​, ರೆಸ್ಟೋರೆಂಟ್ (ಕೂತು ತಿನ್ನುವಂತಿಲ್ಲ)
– BMTC

ಇರುತ್ತೆ (ಸೀಲ್)

– KSRTC ಬಸ್​ (ಕಮ್ಮಿ ಸಂಖ್ಯೆಯಲ್ಲಿ)
– ಮೆಟ್ರೋ ಸಂಚಾರ (ಬೆಳಗ್ಗೆ 8 ರಿಂದ ರಾತ್ರಿ 9 ರವರೆಗೆ)
– ಹೋಟೆಲ್​ನಲ್ಲಿ ಪಾರ್ಸೆಲ್​
– 24×7 ಹೋಂ ಡೆಲಿವರಿ
– ಬೀದಿ ಬದಿ ವ್ಯಾಪಾರ
– ದಿನಸಿ ಅಂಗಡಿ
– ಹಣ್ಣು, ತರಕಾರಿ
– ಮಾಂಸದ ಅಂಗಡಿ
– ಮೀನಿನ ಅಂಗಡಿ
– ಡೈರಿ, ಹಾಲಿನ ಬೂತ್
– ಸಾರ್ವಜನಿಕ ವಿತರಣಾ ವ್ಯವಸ್ಥೆ
– ಪೆಟ್ರೋಲ್‌ ಬಂಕ್‌
– ಮೆಡಿಕಲ್, ಆಸ್ಪತ್ರೆ (ರೋಗಿಗಳು ಮತ್ತು ಅವರನ್ನ ನೋಡಿಕೊಳ್ಳೋರು, ತುರ್ತು ವೈದ್ಯಕೀಯ ಸೇವೆ ಅಗತ್ಯ ಇರೋರು ಮತ್ತು ಲಸಿಕೆ ಹಾಕಿಸಿಕೊಳ್ಳೋರು ಓಡಾಡಬಹುದು. ಪೊಲೀಸರು ಕೇಳಿದ್ರೆ ಮಿನಿಮಲ್​ ಪ್ರೂಫ್ ತೋರಿಸಬೇಕು.)
– ರೈಲು ಸಂಚಾರ
– ವಿಮಾನ ಸಂಚಾರ (ವಿಮಾನ, ರೈಲು ಮತ್ತು ಬಸ್​ ನಿಲ್ದಾಣಗಳಿಗೆ ಹೋಗಲು ಮತ್ತು ಅಲ್ಲಿಂದ ತಮ್ಮ ತಮ್ಮ ಮನೆಗೆ ಹೋಗಲು ಸಾರ್ವಜನಿಕ ಸಾರಿಗೆ, ಖಾಸಗಿ ವಾಹನ, ಟ್ಯಾಕ್ಸಿಗಳಲ್ಲಿ ಓಡಾಡಬಹುದು. ಟಿಕೆಟ್​ ಇಟ್ಟುಕೊಂಡಿರಬೇಕು.)
– ಮದುವೆ (ಹೊರಾಂಗಣದಲ್ಲಾದ್ರೆ 200 ಜನ, ಒಳಾಂಗಣದಲ್ಲಾದ್ರೆ 100 ಜನ, ಜೊತೆಗೆ ಕೊರೋನಾ ನಿಯಮ ಪಾಲನೆ ಕಡ್ಡಾಯ)
– ಐಟಿ – ಬಿಟಿ ಕಂಪನಿ & ಎಲ್ಲಾ ಕೈಗಾರಿಕೆ
– ಸರ್ಕಾರಿ ಕಚೇರಿಗಳು (ಇವೆಲ್ಲವನ್ನ ಹೊರತುಪಡಿಸಿ ಎಮರ್ಜೆನ್ಸಿ, ಎಸೆನ್ಷಿಯಲ್ ಸರ್ವಿಸಸ್​​ ಹಾಗೂ ಕೊರೋನಾ ನಿಯಂತ್ರಣ ಕೆಲಸದಲ್ಲಿ ತೊಡಗಿರೋರು ವೀಕೆಂಡ್​ ಕರ್ಫ್ಯೂನಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಬಹುದು.)
– ವಕೀಲರ ಕಚೇರಿ 50%

-masthmagaa.com

Contact Us for Advertisement

Leave a Reply