ಮಹಿಳೆ ಮತ್ತು ಮಕ್ಕಳಿಗೆ ತೊಂದ್ರೆ ಕೊಟ್ರೆ ಉತ್ತರ ಪ್ರದೇಶ ಸರ್ಕಾರ ಏನ್‌ ಮಾಡುತ್ತೆ ಗೊತ್ತಾ?

masthmagaa.com:

ಮಹಿಳೆಯರಿಗೆ, ಮಕ್ಕಳಿಗೆ ಏನಾದ್ರು ತೊಂದರೆ ಮಾಡಿದ್ರೆ ಅದನ್ನ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯ ಇಲ್ಲ. ಅಂತಹ ಅಪರಾಧಿಗಳಿಗೆ ಆಂಟಿಸಿಪೇಟರಿ ಜಾಮೀನು ಅಥವಾ ನಿರೀಕ್ಷಣಾ ಜಾಮೀನು ಕೊಡಲ್ಲ ಅಂತ ಉತ್ತರ ಪ್ರದೇಶ ಸರ್ಕಾರ ಬಿಲ್‌ ಒಂದನ್ನ ಪಾಸ್‌ ಮಾಡಿದೆ. ಮಹಿಳೆ ಮತ್ತು ಮಕ್ಕಳ ವಿರುದ್ಧದ ಅಪರಾಧದ ತಡೆಗೆ ಜಿರೋ ಟಾಲರೆನ್ಸ್‌ ನೀತಿಯನ್ನ ಉತ್ತರ ಪ್ರದೇಶ ಸರ್ಕಾರ ಅಳವಡಿಸಿಕೊಂಡಿದೆ. ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನಿರಾಕರಿಸುವಂತಹ ಕ್ರಿಮಿನಲ್‌ ಪ್ರೊಸೀಜರ್‌ ಬಿಲ್‌ 2022 ಅನ್ನ ರಾಜ್ಯ ವಿಧಾನ ಸಭೆಯಲ್ಲಿ ಅಂಗೀಕರಿಸಲಾಗಿದೆ. ಇದು ಮಹಿಳೆ ಮಕ್ಕಳಿಗೆ ತೊಂದರೆ ನೀಡಿ ನಿರೀಕ್ಷಣಾ ಜಾಮೀನು ತೆಗೆದುಕೊಳ್ಳುವಂತಹ ಪದ್ಧತಿಯನ್ನ ಕೊನೆಗೊಳಿಸುತ್ತದೆ ಅಂತ ಸರ್ಕಾರ ಹೇಳಿದೆ.

-asthmagaa.com

Contact Us for Advertisement

Leave a Reply