ಸಾಹಿತಿಗಳಿಗೆ ಬಂದ ಬೆದರಿಕೆ ಪತ್ರ ಕುರಿತು ಸಿಸಿಬಿ ಪೊಲೀಸರಿಗೆ ಸಿಕ್ಕ ಮಾಹಿತಿಯೇನು?

masthmagaa.com:

ರಾಜ್ಯ ಲೇಖಕರು, ಚಿಂತಕರು, ಸಾಹಿತಿಗಳಿಗೆ ಬೆದರಿಕೆ ಪತ್ರಗಳು ಬಂದಿದ್ದ ಕೇಸ್‌ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಮಹತ್ವದ ವಿಚಾರ ಬೆಳಕಿಗೆ ಬಂದಿದ್ದು, ಸಾಹಿತಿಗಳಿಗೆ ಕಳಿಸಲಾದ ಬೆದರಿಕೆ ಪತ್ರಗಳ ಹ್ಯಾಂಡ್ ರೈಟಿಂಗ್​ನ ಒಂದೇ ಅಂತ ತಿಳಿದು ಬಂದಿದೆ. ಸದ್ಯ ಬೆದರಿಕೆ ಪತ್ರಗಳನ್ನ FSL​ಗ ರವಾನಿಸಲಾಗಿದೆ. ಇನ್ನು ಎಲ್ಲಾ ಬೆದರಿಕೆ ಪತ್ರಗಳು ಒಂದೇ ಕೈ ಬರಹದಲ್ಲಿದ್ದು ಪತ್ರ ಬರೆದವರು ಯಾರು ಅನ್ನೋದು ಇನ್ನೂ ನಿಗೂಢವಾಗಿದೆ. ಅಲ್ದೆ ಪತ್ರಗಳು ಬೇರೆ ಬೇರೆ ಪೋಸ್ಟ್ ಅಫೀಸ್‌ನಿಂದ ಸಾಹಿತಿಗಳಿಗೆ ರವಾನೆ ಆಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗ್ತಿದೆ ಅಂತ ಪೊಲೀಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply