ಒಮೈಕ್ರಾನ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಡೆಯಿಂದಲೂ ಗುಡ್​ನ್ಯೂಸ್!

masthmagaa.com:

ಇದ್ರ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಕೂಡ ಅದನ್ನೇ ಹೇಳಿದೆ. ಒಮೈಕ್ರಾನ್ ಡೆಲ್ಟಾ ವೇರಿಯಂಟ್​​​​​ಗೆ ಹೋಲಿಸದ್ರೆ ತುಂಬಾ ಅಪಾಯಕಾರಿ ಅಂತ ಈಗಲೇ ಹೇಳಲು ಸಾಧ್ಯವಿಲ್ಲ. ಆದ್ರೆ ಸದ್ಯ ಲಭ್ಯವಿರೋ ದಾಖಲೆಗಳು ಒಮೈಕ್ರಾನ್​​ ಬಂದು ಆಸ್ಪತ್ರೆ ಸೇರೋರ ಸಂಖ್ಯೆ ಕಡಿಮೆ.. ಅಂದ್ರೆ ಕೊರೊನಾ ಮೈಲ್ಡ್ ಆಗಿರುತ್ತೆ ಅಂತ ಹೇಳಿದೆ. ಇನ್ನು ಹಲವು ದೇಶಗಳಲ್ಲಿ ಈಗಾಗಲೇ ಲಸಿಕೆಯ ಬೂಸ್ಟರ್ ಶಾಟ್​​​ಗೆ ಗಮನ ನೀಡಲಾಗ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನೋಮ್​, ಮುಂದುವರಿದ ದೇಶಗಳು ಈಗಾಗಲೇ ಲಸಿಕೆ ಹಾಕಿಸಿಕೊಂಡವರಿಗೆ ಮತ್ತೊಂದು ಡೋಸ್ ಲಸಿಕೆ ಹಾಕುವ ಬದಲು ಅದನ್ನು ಲಸಿಕೆ ಅಗತ್ಯವಿರೋ ದೇಶಗಳಿಗೆ ನೀಡಬೇಕು ಅಂತ ಹೇಳಿದ್ದಾರೆ. ಯಾವುದೇ ಒಂದು ದೇಶ ತಾನು ಮಾತ್ರ ಈ ಕೊರೋನಾ ಮಹಾಮಾರಿಯಿಂದ ತಪ್ಪಿಸಿಕೊಂಡು ಹೊರಬರೋಕೆ ಸಾಧ್ಯವಿಲ್ಲ. ಯಾಕಂದ್ರೆ ಲಸಿಕೆ ಹಾಕದ ಪ್ರದೇಶಗಳಲ್ಲಿ ಅಪಾಯಕಾರಿ ರೂಪಾಂತರಿಗಳು ಸೃಷ್ಟಿಯಾಗೋ ಅಪಾಯ ಇರುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply