ಹಿಜಾಬ್​ ಬಿಟ್ಟು ಪರೀಕ್ಷೆ ಬರೆಯಲ್ಲ! ಮತ್ತೆ 3 ವಿದ್ಯಾರ್ಥಿನಿಯರು ಗೈರು!

masthmagaa.com:

ಹಿಜಾಬ್‌‌ ಪರ ಹೈಕೋರ್ಟ್ ಮೆಟ್ಟಿಲೇರಿದ್ದ ಉಡುಪಿ ಸರಕಾರಿ ಬಾಲಕಿಯರ ಪಿಯು ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರ ಪೈಕಿ ಮತ್ತೆ ಮೂವರು ಶನಿವಾರದ ದ್ವಿತೀಯ ಪಿಯು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಅಲ್ಮಾಸ್, ಹಾಜ್ರಾ ಶಿಫಾ ಹಾಗೂ ಆಯಿಶಾ ಪರೀಕ್ಷೆಗೆ ಗೈರಾದವರು. ಶುಕ್ರವಾರ ವಾಣಿಜ್ಯ ವಿಭಾಗದ ಆಲಿಯಾ ಅಸಾದಿ ಹಾಗೂ ರೇಶಮ್ ಪರೀಕ್ಷೆ ಬಹಿಷ್ಕರಿಸಿದ್ದರು. ಈ ಮೂಲಕ ಆರರಲ್ಲಿ ಐವರು ವಿದ್ಯಾರ್ಥಿನಿಯರು ಗೈರು ಹಾಜರಾದಂತಾಗಿದೆ.

-masthmagaa.com

Contact Us for Advertisement

Leave a Reply