masthmagaa.com:

ಪ್ರಧಾನಿ ಮೋದಿ ಜೊತೆ ಇವತ್ತು ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ರಾಜ್ಯದಲ್ಲಿ ಲಾಕ್​ಡೌನ್​, ನೈಟ್​ ಕರ್ಫ್ಯೂ ಜಾರಿಗೆ ತರಲ್ಲ. ಯಾರೂ ಭಯಪಡುವ ಅಗತ್ಯವಿಲ್ಲ. ಈಗ ಪರಿಸ್ಥಿತಿ ಹೇಗಿದೆಯೋ ಅದೇ ರೀತಿ ಮುಂದುವರಿಯುತ್ತೆ ಅಂತ ಹೇಳಿದ್ದಾರೆ. ಅದರರ್ಥ ಜನ ತಮಗಿಷ್ಟ ಬಂದಂತೆ ಮಾಸ್ಕ್ ಧರಿಸದೇ ಓಡಾಡುವಂತಿಲ್ಲ. ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಮಾಸ್ಕ್ ಧರಿಸದಿದ್ದರೆ ದಂಡ ಹಾಕುವಂತೆ ಸೂಚಿಸಲಾಗಿದೆ. ಇನ್ನು ಸಭೆಯಲ್ಲಿ ಬೆಂಗಳೂರು, ಕಲಬುರಗಿ ಮತ್ತು ಬೀದರ್​ ಜಿಲ್ಲೆಗಳಲ್ಲಿ ಕೊರೋನಾ ಜಾಸ್ತಿಯಾಗ್ತಿದೆ. ಬೆಂಗಳೂರು ಸೇರಿದಂತೆ ಮಹಾರಾಷ್ಟ್ರ ಮತ್ತು ಕೇರಳ ಜೊತೆ ಗಡಿ ಹಂಚಿಕೊಂಡಿರೋ ಜಿಲ್ಲೆಗಳಲ್ಲಿ ಹೆಚ್ಚು ಎಚ್ಚರ ವಹಿಸಬೇಕು. ಬೆಂಗಳೂರಿನಲ್ಲಿ ಬಂದ್ ಆಗಿದ್ದ ಕೋವಿಡ್ ಕೇರ್ ಸೆಂಟರ್​ಗಳಲ್ಲಿ 3 ಕೇಂದ್ರಗಳನ್ನ ಮತ್ತೆ ತೆರೆಯಲಾಗುತ್ತೆ. ಕೊರೋನಾ ಲಸಿಕೆಯನ್ನ ಸದ್ಯ ಆಸ್ಪತ್ರೆಗಳಲ್ಲೇ ಹಾಕಲಾಗ್ತಿದೆ. ಮುಂದಿನ ದಿನಗಳಲ್ಲಿ ವೃದ್ಧಾಶ್ರಮ, ಅಪಾರ್ಟ್​ಮೆಂಟ್​ ಮತ್ತು ದುರ್ಗಮ ಪ್ರದೇಶದಲ್ಲು ಅವಕಾಶ ಮಾಡಿಕೊಡಬೇಕು ಅಂತ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ರಾಜ್ಯದಲ್ಲಿ ಇದುವರೆಗೆ ನಡೆಸಿದ ಕೋರೋನಾ ಪರೀಕ್ಷೆಗಳಲ್ಲಿ 93 ಪರ್ಸೆಂಟ್​ಗೂ ಹೆಚ್ಚು ಪರೀಕ್ಷೆಗಳು RT-PCR ಪರೀಕ್ಷೆ ಆಗಿರೋದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ರು ಅಂತ ಸಿಎಂ ಯಡಿಯೂರಪ್ಪ ಹೇಳಿದ್ಧಾರೆ.

-masthmagaa.com

Contact Us for Advertisement

Leave a Reply