ಪಾಕಿಸ್ತಾನಕ್ಕೆ ನೆರವು ನೀಡಬಾರದು: ಅಮೆರಿಕದ ಮಾಜಿ ಎನ್​ಎಸ್​ಎ ಆಗ್ರಹ

masthmagaa.com:

ಅಮೆರಿಕ ಪಾಕಿಸ್ತಾನಕ್ಕೆ ಯಾವುದೇ ರೀತಿಯ ನೆರವು ನೀಡಬಾರದು ಅಂತ ಅಮೆರಿಕ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೆನರಲ್ ಹೆಚ್​ಆರ್ ಮೆಕ್​​ ಮಾಸ್ಟರ್ ಆಗ್ರಹಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಟೇಕೋವರ್ ಮಾಡ್ಕೊಂಡ್ಮೇಲೆ ಇಮ್ರಾನ್ ಖಾನ್ ಬಾಯಿಗೆ ಬಂದಂಗೆ ಮಾತಾಡಿದ್ದಾರೆ. ಹೀಗಾಗಿ ಪಾಕಿಸ್ತಾನಕ್ಕೆ ಯಾವುದೇ ರೀತಿಯ ಸಹಾಯ ನೀಡಬಾರದು. ಅದೇ ರೀತಿ ತಾಲಿಬಾನಿಗಳಿಗೂ ನೆರವು ನೀಡಬಾರದು. ಯಾಕಂದ್ರೆ ತಾಲಿಬಾನಿಗಳಿಗೆ ದುಡ್ಡು ನೀಡಿದ್ರೆ ಅಥವಾ ತಾಲಿಬಾನಿಗಳ ಮೂಲಕ ಅಫ್ಘಾನಿಸ್ತಾನದ ಜನತೆಗೆ ಮಾನವೀಯ ನೆರವಿಗಾಗಿ ದುಡ್ಡು ನೀಡಿದ್ರೆ ಅದನ್ನು ತಾಲಿಬಾನಿಗಳು ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಳಸ್ತಾರೆ. ಅದ್ರಿಂದ ಮತ್ತೊಂದು ದೊಡ್ಡ ಅಪಾಯ ಎದುರಾಗುತ್ತೆ ಅಂತ ಹೇಳಿದ್ದಾರೆ. ಅಂದಹಾಗೆ ಪಾಕಿಸ್ತಾನಕ್ಕೆ ನೀಡ್ತಿದ್ದ ಭದ್ರತಾ ನೆರವನ್ನು ಟ್ರಂಪ್ ಅವಧಿಯಲ್ಲಿ ಅಮೆರಿಕ ಬಂದ್ ಮಾಡಿತ್ತು. ಜೋ ಬೈಡೆನ್ ಅಧ್ಯಕ್ಷರಾದ ಬಳಿಕವೂ ಅಮೆರಿಕ ಈ ನೆರವನ್ನು ಮುಂದುವರಿಸಿಲ್ಲ.

-masthmagaa.com

Contact Us for Advertisement

Leave a Reply