ಯೋಗಿ Vs ಪಾಕಿಸ್ತಾನ್! ಸಿಂಧ್ ರಾಜ್ಯ ಭಾರತಕ್ಕೆ ಸೇರಬೇಕು!

masthmagaa.com:

ಅಖಂಡ ಭಾರತ ವಿಚಾರವಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ನೀಡಿರುವ ಹೇಳಿಕೆ ಪಾಕಿಸ್ತಾನ ನಿದ್ದೆಗೆಡುವಂತೆ ಮಾಡಿದೆ. ಸ್ವಾತಂತ್ರ್ಯಕ್ಕೂ ಮೊದಲು ಅಖಂಡ ಭಾರತದ ಭಾಗವಾಗಿದ್ದ, ಪ್ರಸ್ತುತ ಪಾಕಿಸ್ತಾನದಲ್ಲಿರುವ ಸಿಂಧ್‌ ಪ್ರಾಂತ್ಯವನ್ನ ಭಾರತಕ್ಕೆ ಮರಳಿ ಸೇರಿಸಿಕೊಳ್ಳದೇ ಇರಲು ಭಾರತಕ್ಕೆ ಯಾವುದೇ ಕಾರಣವಿಲ್ಲ ಅಂತ ಯೋಗಿ ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ. ಲಕ್ನೋದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸಿಂಧಿ ಸಮಾವೇಶದಲ್ಲಿ ಮಾತಾಡಿರುವ ಯೋಗಿ, 500 ವರ್ಷಗಳ ಬಳಿಕ ರಾಮಜನ್ಮಭೂಮಿಯನ್ನ ವಶಪಡಿಸಿಕೊಳ್ಳು ಸಾಧ್ಯವಾಗಿದೆ ಅನ್ನೋದಾದ್ರೆ ಸಿಂಧ್‌ ಪ್ರಾಂತ್ಯವನ್ನ ವಶಪಡಿಸಿಕೊಳ್ಳದೇ ಇರೋಕೆ ಕಾರಣವೇ ಇಲ್ಲ. ಅಂದ್ರೆ ನಾವು ಯಾವಾಗ ಬೇಕಾದ್ರೂ ಸಿಂಧ್‌ ಪ್ರಾಂತ್ಯವನ್ನ ಭಾರತಕ್ಕೆ ಸೇರಿಸಿಕೊಳ್ಳಬಹುದು ಅಂತ ಯೋಗಿ ಹೇಳಿದ್ದಾರೆ. ಇದೇ ವೇಳೆ ಭಾರತ ವಿಭಜನೆಯಾದಾಗ ದೇಶದ ಬಹುದೊಡ್ಡ ಪ್ರದೇಶವಾಗಿದ್ದ ಸಿಂಧ್‌ ಪ್ರಾಂತ್ಯ ಪಾಕಿಸ್ತಾನಕ್ಕೆ ಸೇರಿದೆ. ಆ ಸಮಯದಲ್ಲಿ ಉಂಟಾದ ಭೀಕರ ಸಂಘರ್ಷದಲ್ಲಿ ಹಲವಾರು ಹಿಂದೂಗಳು ಪ್ರಾಣಕಳೆದುಕೊಂಡರು. ಅಷ್ಟೆ ಅಲ್ದೆ ಈಗಲೂ ಅಲ್ಲಿನ ಹಿಂದೂಗಳು ಮತಾಂತರ, ಬಲವಂತದ ಮದುವೆ ಹಾಗೂ ಭಯೋತ್ಪಾದನೆ ಸೇರಿದಂತೆ ಹಲವು ಸಂಕಷ್ಟಗಳನ್ನ ಫೇಸ್‌ ಮಾಡ್ತಿದ್ದಾರೆ. ಹೀಗಾಗಿ ಸಿಂಧ್‌ ಸಮುದಾಯದ ಜನ ತಮ್ಮ ಮಕ್ಕಳಿಗೆ ಹಾಗೂ ಮುಂದಿನ ಪೀಳಿಗೆಗೆ ಇತಿಹಾಸ ಹೇಳಬೇಕು. ಜೊತೆಗೆ ಸಮುದಾಯದ ಸಂಸ್ಕೃತಿಯನ್ನು ತಿಳಿ ಹೇಳಬೇಕು. ಈ ನಿಟ್ಟಿನಲ್ಲಿ ಸಿಂಧ್ ಸಮುದಾಯ ಈ ಸಂಸ್ಕತಿಯನ್ನು ಉಳಿಸಿ ಬೆಳೆಸುವಲ್ಲಿ ಹಿರಿಯರು ಪ್ರಮುಖ ಪಾತ್ರ ನಿರ್ವಹಿಸಬೇಕು ಅಂತ ಯೋಗಿ ಕರೆ ನೀಡಿದ್ದಾರೆ. ಇತ್ತ ಯೋಗಿ ಹೇಳಿಕೆಯಿಂದ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಗಿರುವ ಪಾಕಿಸ್ತಾನ ರಿಯಾಕ್ಟ್‌ ಮಾಡಿದ್ದು, ಇದು ಅತ್ಯಂತ ಬೇಜವಾಬ್ದಾರಿ ಹೇಳಿಕೆ ಅಂತ ಹೇಳಿದೆ. ರಾಜಕಾರಣಿಗಳ ಪ್ರಚೋದನಕಾರಿ ಹೇಳಿಕೆಗಳು ʻಅಖಂಡ ಭಾರತʼ ಅನ್ನೋ ಅನಪೇಕ್ಷಿತ ಪ್ರತಿಪಾದನೆಯಿಂದ ಇನ್‌ಸ್ಪೈರ್‌ ಆಗಿದೆ. ಜೊತೆಗೆ ಇತಿಹಾಸದ ವಿಕೃತ ದೃಷ್ಟಿಕೋನವನ್ನ ತೋರಿಸುತ್ತೆ ಅಂತ ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರೆ ಮುಮ್ತಾಜ್‌ ಜಹ್ರಾ ಬಲೋಚ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply