ಸಂಸದರ ಅಮಾನತು ವಾಪಸ್​​​ಗೆ ನಿರಾಕರಣೆ! ಇವತ್ತು ಏನೇನಾಯ್

masthmagaa.com:

ನಿನ್ನೆ ಸದನದಲ್ಲಿ ಅಸಭ್ಯವಾಗಿ ವರ್ತಿಸಿದ ಕಾಂಗ್ರೆಸ್​​, ಟಿಎಂಸಿ ಸೇರಿದಂತೆ ಒಟ್ಟು 12 ರಾಜ್ಯಸಭಾ ಸಂಸದರನ್ನು ಇಡೀ ಚಳಿಗಾಲದ ಅಧಿವೇಶನ ಮುಗಿಯೋವರೆಗೆ ಅಮಾನತು ಮಾಡಲಾಗಿದೆ. ಸದನದಲ್ಲಿಂದು ಮಾತಾಡಿದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಈ ರೀತಿ ಸಂಸದರನ್ನು ಅಮಾನತು ಮಾಡೋದು ಕಾನೂನಿಗೆ ವಿರುದ್ಧ.. ಈ ಕೂಡಲೇ ಅವರ ಮೇಲಿನ ಸಸ್ಪೆನ್ಶನ್ ತೆಗೆದು ಹಾಕಬೇಕು ಅಂತ ಒತ್ತಾಯಿಸಿದ್ರು. ಆದ್ರೆ ಸಭಾಪತಿ ವೆಂಕಯ್ಯ ನಾಯ್ಡು, ಅಮಾನತುಗೊಂಡ ಸಂಸದರು ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ.. ಹೀಗಾಗಿ ಅಮಾನತನ್ನು ಹಿಂಪಡೆಯಲು ಸಾಧ್ಯವೇ ಇಲ್ಲ ಅಂತ ಹೇಳಿದ್ರು. ಇದಾದ ಬಳಿಕವೂ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ 18 ಮಂದಿ ವಿಪಕ್ಷ ನಾಯಕರು ಹೋಗಿ ಸಸ್ಪೆನ್ಶನ್ ವಾಪಸ್ ಪಡೀರಿ ಅಂತ ಕೇಳಿದ್ರು. ಆದ್ರೆ ಆವಾಗ್ಲೂ ವೆಂಕಯ್ಯ ನಾಯ್ಡು ಅಮಾನತು ವಾಪಸ್​​ಗೆ ನಿರಾಕರಿಸಿದ್ದಾರೆ ಅಂತ ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಈಗಲೂ ಅಮಾನಿತ ಶಾಸಕರು ಸಭಾಪತಿಗಳ ಕ್ಷಮೆಯಾಚಿಸಿದ್ರೆ ಅವರನ್ನು ಅಮಾನತು ಮಾಡಿರೋ ನಿರ್ಧಾರವನ್ನು ಪುನರ್​ ಪರಿಶೀಲನೆ ಮಾಡ್ತೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply