ನಾವೇ ಸ್ಟ್ರಾಂಗ್, ನಮ್ ಸೇನೆಯೇ ಬಾಸು ಎಂದ ಕಿಮ್​!

masthmagaa.com:

ನಮ್ಮ ಮಿಲಿಟರಿ ಶಕ್ತಿಗೆ ಸಾಟಿಯೇ ಇಲ್ಲ.ನಾವೀಗ ಸೋಲನ್ನೇ ಕಾಣದ ಶಕ್ತಿ ಹೊಂದಿದ್ದೇವೆ ಅಂತ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅಬ್ಬರಿಸಿದ್ದಾರೆ. ಕೊರಿಯಾದ ʼದಿ ಕೊರಿಯನ್‌ ಪೀಪಲ್ಸ್‌ ರೆವಲ್ಯೂಷನರಿ ಆರ್ಮಿ ಸ್ಥಾಪನೆಯಾಗಿ 90 ವರ್ಷಗಳು ಕಳೆದಿದ್ದು ಇದರ ಅಂಗವಾಗಿ ವಾರ್ಷಿಕೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ತಮ್ಮ ಸೇನೆಯನ್ನು ಉದ್ದೇಶಿಸಿ ಮಾತನಾಡಿದ ಕಿಮ್‌, ನಾವು ಜಗತ್ತಿನ ಪ್ರಬಲ ಸೇನೆ ಹೊಂದಿದ್ದೇವೆ. ನಮ್ಮ ಸೇನೆಯ ಬಲಕ್ಕೆ ಸಾಟಿಯೇ ಇಲ್ಲ, ನಾವು ಸೋಲನ್ನೇ ಕಾಣದ ಶಕ್ತಿ ಹೊಂದಿದ್ದೇವೆ..ನಮ್ಮನ್ನ
ಇಗ್ನೋರ್‌ ಮಾಡೋಕಾಗಲ್ಲ, ಯಾರೊಬ್ಬರೂ ಟಚ್‌ ಮಾಡೋಕಾಗಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply