ಕಿಮ್ ಜಾಂಗ್​ ಉನ್​​​ಗೆ ಏನೂ ಆಗಿಲ್ಲ: ದಕ್ಷಿಣ ಕೊರಿಯಾ ಸ್ಪಷ್ಟನೆ

masthmagaa.com:

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯವಾಗಿದ್ದಾರೆ ಅಂತ ದಕ್ಷಿಣ ಕೊರಿಯಾ ತಿಳಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ದಕ್ಷಿಣ ಕೊರಿಯಾ ಅಧ್ಯಕ್ಷರ ವಿದೇಶಾಂಗ ನೀತಿ ಸಲಹೆಗಾರ ಮೂನ್ ಚುಂಗ್ ಇನ್​, ಕಿಮ್ ಜಾಂಗ್ ಉನ್​ ಅವರಿಗೆ ಏನೂ ಆಗಿಲ್ಲ.. ಆರೋಗ್ಯವಾಗಿದ್ದಾರೆ. ಏಪ್ರಿಲ್ 13ರಿಂದ ವೋನ್ಸಾನ್ ಪ್ರದೇಶದಲ್ಲಿ ಕಿಮ್ ತಂಗಿದ್ದಾರೆ. ಯಾವುದೇ ರೀತಿಯ ಅನುಮಾನಾಸ್ಪದ ಚಲನೆಗಳು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.

ಏಪ್ರಿಲ್ 15ರಂದು ನಡೆದ ತನ್ನ ಅಜ್ಜನ 108ನೇ ಜನ್ಮ ದಿನಾಚರಣೆ ಸಂದರ್ಭದಲ್ಲೂ ಕಿಮ್ ಗೈರಾಗಿದ್ದರು. ಈ ಕಾರ್ಯಕ್ರಮದಲ್ಲಿ ಈವರೆಗೆ ಕಿಮ್ ಗೈರಾಗಿರಲಿಲ್ಲ. ಇದು ಉತ್ತರ ಕೊರಿಯಾಗೆ ತುಂಬಾ ಪ್ರಮುಖ ದಿನವಾಗಿದೆ. ಆದ್ರೂ ಕಿಮ್ ಈ ಕಾರ್ಯಕ್ರಮದಿಂದ ದೂರ ಉಳಿದಿದ್ರು. ಕಿಮ್ ಹಾರ್ಟ್​ ಸರ್ಜರಿಗೆ ಒಳಗಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಇದೇ ಕಾರಣಕ್ಕೆ ಅವರು ತಮ್ಮ ಅಜ್ಜನ 108ನೇ ಜನ್ಮದಿನದಲ್ಲಿ ಭಾಗಿಯಾಗಲಿಲ್ಲ ಎಂದು ಈ ಹಿಂದೆ ವರದಿಯಾಗಿತ್ತು.

-masthmagaa.com

Contact Us for Advertisement

Leave a Reply