ಉತ್ತರ ಕೊರಿಯಾದಿಂದ ಮತ್ತೊಂದು ಕ್ಷಿಪನಿ ಉಡಾವಣೆ!

masthmagaa.com:

ಉತ್ತರ ಕೊರಿಯಾದ ಅಣ್ವಸ್ತ್ರ ಶಸ್ತ್ರಾಸ್ತ್ರಗಳ ಅಭಿವೃದ್ದಿಯ ಭಾಗವಾಗಿ ಮತ್ತೆ ಗೈಡೆಡ್​​ ವೆಪನ್ಸ್ ಸಿಸ್ಟಂನ್ನು ಪರೀಕ್ಷಿಸಲಾಗಿದೆ. ಈ ಪರೀಕ್ಷೆಯ ಜವಾಬ್ದಾರಿಯನ್ನು ಖುದ್ದು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ನೇ ನಿಂತು ಮೇಲ್ವಿಚಾರಣೆ ನಡೆಸಿದ್ದಾರೆ ಅಂತ ಕೂಡ ಗೊತ್ತಾಗಿದೆ. ಈ ಮೂಲಕ ಮತ್ತೊಮ್ಮೆ ಉತ್ತರ ಕೊರಿಯಾ ತನ್ನ ಮೇಲಿನ ನಿರ್ಬಂಧಗಳನ್ನು ಉಲ್ಲಂಘಿಸಿದೆ. ನಾಳೆ ದಕ್ಷಿಣ ಕೊರಿಯಾ ಮತ್ತು ಅಮೆರಿಕ ನಡುವೆ ಜಂಟಿ ಮಿಲಿಟರಿ ಸಮರಭ್ಯಾಸ ನಡೆಯಲಿದ್ದು, ಇದಕ್ಕೆ ಉತ್ತರ ಕೊರಿಯಾ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಅದ್ರ ನಡುವೆಯೇ ಈಗ ಉತ್ತರ ಕೊರಿಯಾ ಶಾರ್ಟ್ ರೇಂಜ್ ಕ್ಷಿಪಣಿ ಪರೀಕ್ಷೆ ನಡೆಸಿದೆ. ಈ ಬಗ್ಗೆ ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮವೇ ಖಚಿತಪಡಿಸಿದ್ದು, ಪರೀಕ್ಷೆ ಯಶಸ್ವಿಯಾಗಿದೆ ಅಂತ ಹೇಳಿದೆ. ಆದ್ರೆ ಪರೀಕ್ಷೆ ನಡೆಸಿರೋದು ಎಲ್ಲಿ..ಯಾವಾಗ ಅಂತ ಮಾತ್ರ ಮಾಹಿತಿ ನೀಡಿಲ್ಲ.

-masthmagaa.com

Contact Us for Advertisement

Leave a Reply