ಮತ್ತೆ ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ!

masthmagaa.com:

(ಉತ್ತರ ಕೊರಿಯಾ ತನ್ನ ಕ್ಷಿಪಣಿ ಪರೀಕ್ಷೆಯನ್ನು ಮುಂದುವರಿಸಿದೆ ಅಂತ ಅಮೆರಿಕದ ಸೇನೆ ಮಾಹಿತಿ ನೀಡಿದೆ. ತನ್ನ ಎಲ್ಲಾ ರೀತಿಯ ಮಿಲಿಟರಿ ಪ್ರೋಗ್ರಾಂ ಮುಂದುವರಿಸುತ್ತಿದ್ದು, ಇದ್ರಿಂದ ನೆರೆಹೊರೆಯ ದೇಶಗಳಿಗೆ ಮತ್ತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಧಕ್ಕೆಯಾಗಲಿದೆ ಅಂತ ಅಮೆರಿಕ ಹೇಳಿದೆ. ಈ ನಡುವೆ ಉತ್ತರ ಕೊರಿಯಾ ಸರ್ಕಾರಿ ಮಾಧ್ಯಮ ಕೂಡ ಶನಿವಾರ ಮತ್ತು ಭಾನುವಾರ ಲಾಂಗ್​ ರೇಂಜ್ ಕ್ರೂಸ್​ ಮಿಸೈಲ್​ ಪರೀಕ್ಷೆ ನಡೆಸಿದೆ. 1500 ಕಿಲೋಮೀಟರ್​​ವರಗೆ ಹಾರಿದ ಈ ಕ್ಷಿಪಣಿ, ಉತ್ತರ ಕೊರಿಯಾದ ಜಲಪ್ರದೇಶದಲ್ಲಿ ಟಾರ್ಗೆಟ್​ ರೀಚ್ ಆಗಿದೆ ಅಂತ ಕೂಡ ವರದಿ ಮಾಡಿದೆ. ಪರಮಾಣು ಪ್ರೋಗ್ರಾಂ ವಿಚಾರವಾಗಿ ಅಮೆರಿಕದ ಜೊತೆಗೆ ಸಂಘರ್ಷ ಜೋರಾಗಿರೋ ಹೊತ್ತಲ್ಲೇ ಈ ಕ್ಷಿಪಣಿ ಪರೀಕ್ಷೆ ಮಹತ್ವ ಪಡೆದುಕೊಂಡಿದೆ. ಅಂದಹಾಗೆ ಈ ರೀತಿಯ ಕ್ರೂಸ್​ ಮಿಸೈಲ್ ಪರೀಕ್ಷೆಗೆ ಉತ್ತರ ಕೊರಿಯಾ ಮೇಲೆ ಯಾವುದೇ ರೀತಿಯ ನಿರ್ಬಂಧ ಇಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಮೆರಿಕದ ಇಂಡೋ- ಪೆಸಿಫಿಕ್ ಕಮಾಂಡ್​​, ತಮ್ಮ ಮಿತ್ರರಾಷ್ಟ್ರಗಳ ಜೊತೆ ಸೇರ್ಕೊಂಡು ಪರಿಸ್ಥಿತಿಯ ಮೇಲೆ ಕಣ್ಣಿಡ್ತೀವಿ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply