ಡೈನೋಸಾರ್‌ ನಾಶಕ್ಕೆ ಕ್ಷುದ್ರಗ್ರಹ ಕಾರಣವಲ್ಲ! ರಿಸರ್ಚ್‌ ತಂಡ ಹೇಳಿದ್ದೇನು?

masthmagaa.com:

66 ಕೋಟಿ ವರ್ಷಗಳ ಹಿಂದೆ ಕ್ಷುದ್ರಗ್ರಹ ಮತ್ತು ಭೂಮಿ ನಡುವೆ ಘರ್ಷಣೆ ಆಗಿ ಡೈನೋಸಾರ್‌ ಸಂತತಿ ನಾಶವಾಗಿತ್ತು ಅಂತ ನಂಬಲಾಗಿದೆ. ಈ ಬಗ್ಗೆ ಹಲವಾರು ವರ್ಷಗಳಿಂದ ವಿಜ್ಞಾನಿಗಳು, ಡೈನೋಸಾರ್‌ನಂತ ದೊಡ್ಡ ಜೀವಿಯ ಸಂತತಿ ನಾಶವಾಗೋಕೆ ಕೇವಲ ಕ್ಷುದ್ರಗ್ರಹ ಮಾತ್ರ ಕಾರಣವಾಯ್ತಾ ಅಂತೆಲ್ಲಾ ಚರ್ಚೆ ಮಾಡ್ತಿದ್ರು. ಆದ್ರೆ ಇದೀಗ ಅಂತರಾಷ್ಟ್ರೀಯ ರಿಸರ್ಚರ್ಸ್‌ ಟೀಮ್‌ ಒಂದು, ʻಇಲ್ಲ ಡೈನೋಸಾರ್‌ ನಾಶವಾಗೋಕೆ ಕ್ಷುದ್ರಗ್ರಹ ಕಾರಣವಲ್ಲʼ ಅಂತ ಹೇಳಿದೆ. ಇವುಗಳ ನಾಶಕ್ಕೆ ಜ್ವಾಲಾಮುಖಿ ಸ್ಫೋಟಗಳು ಕಾರಣವಾಗಿರಬಹುದು ಅಂತ ತಿಳಿಸಿದೆ. ಡೈನೋಸಾರ್‌ಗಳು ಇರೋ ಟೈಮ್‌ನಲ್ಲಿ, ನಮ್ಮ ಗ್ರಹದಲ್ಲಿ ಸಲ್ಫರ್‌ ಲೆವೆಲ್‌ ತೀರ ಜಾಸ್ತಿಯಿದ್ದ ಕಾರಣ, ಜ್ವಾಲಾಮುಖಿ ಸ್ಫೋಟಗಳು ಹೆಚ್ಚಾಗಿ ಇವುಗಳ ನಾಶವಾಗಿದೆ. ಜೊತೆಗೆ ಈ ಸಲ್ಫರ್‌ ಲೆವೆಲ್‌ ಜಾಸ್ತಿಯಾಗೋಕೆ ಭಾರತದ ಡೆಕ್ಕನ್‌ ಟ್ರ್ಯಾಪ್ಸ್‌ಗಳು ಕಾರಣ ಅಂತ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply