ಹಿಜಾಬ್‌ ಧರಿಸಿ ಪರೀಕ್ಷೆಗೆ ಬಂದ ವಿಧ್ಯಾರ್ಥಿಗಳು. ಆಮೇಲೆನಾಯ್ತು?

masthmagaa.com:

ಹಿಜಾಬ್‌ಗಾಗಿ ಇಷ್ಟೆಲ್ಲ ವಿವಾದ ಆಗಿ, ಕೊನೆಗೆ ಹೈಕೋರ್ಟ್‌ ಹೇಳಿದ್ರು ಕೂಡ ಕೇಳದೇ ಮೊಂಡುತನ ತೋರ್ಸಿರೋ ಕೆಲವು ವಿದ್ಯಾರ್ಥಿನಿಯರು ಇವತ್ತು ಹಿಜಾಬ್‌ ಹಾಕೊಂಡೇ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಬಂದಿದ್ದಾರೆ. ಆದ್ರೆ ಹಿಜಾಬ್‌ಗೆ ಅವಕಾಶ ಕೊಡದ ಕಾರಣ ಪರೀಕ್ಷೆ ಬರೆಯದೇ ವಾಪಸ್‌ ಮನೆಗೆ ಹೋಗಿದ್ದಾರೆ. ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜ್‌ನಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳಾದ ಅಲಿಯಾ ಅಸಾದಿ ಮತ್ತು ರೇಶಮ್‌ ಹಿಜಾಬ್‌ ಧರಿಸಿ ಬಂದಿದ್ದಾರೆ. ಆದ್ರೆ ಪ್ರಾಂಶುಪಾಲರು ಅದಕ್ಕೆ ಅವಕಾಶ ನೀಡಿಲ್ಲ. ನಂತ್ರ ಪರೀಕ್ಷೆಗೆ ಹಾಜರಾಗುವ ಅವಧಿ ಮುಕ್ತಾಯವಾದ ಕೂಡಲೇ ಪರೀಕ್ಷಾ ಕೇಂದ್ರದಿಂದ ಆಚೆ ಕಳಿಸಿದ್ದಾರೆ.

-masthmagaa.com

Contact Us for Advertisement

Leave a Reply