ನಾನು ಭಾರತ, ಅಮೆರಿಕಕ್ಕೆ ವಿರುದ್ಧವಾಗಿಲ್ಲ: ಇಮ್ರಾನ್ ಖಾನ್

masthmagaa.com:

ಪಿಎಂ ಕುರ್ಚಿ ಖಾಲಿ ಮಾಡಿದ ಇಮ್ರಾನ್‌ ಖಾನ್‌ ಈಗ ಪಾಕ್‌ನ ಹೊಸ ಸರ್ಕಾರದ ವಿರುದ್ದ ರ್ಯಾಲಿ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ಕಾಲಿಗೆ ಚಕ್ರ ಕಟ್ಕೊಂಡು ಪಾಕಿಸ್ತಾನವನ್ನ ರೌಂಡ್‌ ಹಾಕ್ತಿರೋ ಇಮ್ರಾನ್‌ ಈಗ ಕರಾಚಿಯಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಇಮ್ರಾನ್‌ “ನನ್ನ ಸರ್ಕಾರವನ್ನ ಉರುಳಿಸೋಕೆ ವಿದೇಶಿ ಶಕ್ತಿಗಳು ಫಂಡಿಂಗ್ ಮಾಡಿದ್ವು ಅಂತ ಪುನರುಚ್ಚಾರ ಮಾಡಿದ್ದಾರೆ. ಅಲ್ದೇ ನಮ್ಮ ವಿರುದ್ದ ಮಂಡಿಸಿದ ನೋ ಕಾನ್ಫಿಡೆನ್ಸ್‌ ಮೋಷನ್‌ ಮ್ಯಾಚ್‌ ಫಿಕ್ಸಿಂಗ್‌ ಆಗಿತ್ತು. ಅದಕ್ಕೆ ಮೂರ್ನಾಲ್ಕು ತಿಂಗಳುಗಳಿಂದ ತಯಾರಿ ನಡೆದಿತ್ತು ಅಂತ ಆರೋಪಿಸಿದ್ದಾರೆ. ಇನ್ನು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವ್ರು “ಇದು ನಿಮ್ಮ ಮಕ್ಕಳ ಭವಿಷ್ಯದ ಪ್ರಶ್ನೆ, ಹೊರ ರಾಷ್ಟ್ರಗಳಿಂದ ಆಮದಾಗಿರೋ ಸರ್ಕಾರವನ್ನ ನಾನು ಇಲ್ಲವಾಗಿಸಬೇಕು. ಅದಕ್ಕೆ ನೀವು ಬೆಂಬಲ ನೀಡ್ಬೇಕು ಅಂತ ಜನರಿಗೆ ಕರೆ ನೀಡಿದ್ದಾರೆ. ಇನ್ನು ಇದೇ ಸಂಧರ್ಭದಲ್ಲಿ ಮಾನವೀಯತೆಯ ಬಗ್ಗೆಯೂ ಮಾತಾಡಿದ ಇಮ್ರಾನ್, “ನಾನು ಅಮೆರಿಕಾ, ಭಾರತ ಅಥವಾ ಯೂರೋಪಿನ ಯಾವುದೇ ದೇಶಗಳ ವಿರುದ್ದ ಇಲ್ಲ.. ನಾನು ಯಾವುದೇ ಸಮುದಾಯದ ವಿರುದ್ದವೂ ಇಲ್ಲ. ನಾನು‌ ಯಾವಾಗಲೂ ಮಾನವೀಯತೆಯ ಪರ ಇರ್ತೀನಿ” ಅಂತ ಹೇಳಿಕೆ ನೀಡಿದ್ದಾರೆ.

-masthmagaa.com

 

Contact Us for Advertisement

Leave a Reply