ಉಡುಗೊರೆಯಲ್ಲೂ ಇಮ್ರಾನ್ ಖಾನ್ ಕಳ್ಳಾಟ!

masthmagaa.com:

ಪ್ರಧಾನಿ ಪಟ್ಟದಿಂದ ಕೆಳಗಿಳಿದಿರೋ ಇಮ್ರಾನ್ ಖಾನ್ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. ಇಮ್ರಾನ್ ತಮ್ಮ ಮೂರೂವರೆ ವರ್ಷಗಳ ಅವಧಿಯಲ್ಲಿ ಪ್ರಧಾನಿಯಾಗಿ ವಿದೇಶಿ ನಾಯಕರಿಂದ ಪಡೆದ ದುಬಾರಿ ಗಿಫ್ಟ್​​ಗಳನ್ನು ಕಡಿಮೆ ದುಡ್ಡು ಕೊಟ್ಟು ಅಥವಾ ದುಡ್ಡೇ ಕೊಡದೇ ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಅದನ್ನು ದುಬೈನಲ್ಲಿ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ ಅಂತ ಹೊಸ ಪ್ರಧಾನಿ ಶಹಬ್ಬಾಸ್ ಶರೀಫ್ ಆರೋಪ ಮಾಡಿದ್ದಾರೆ. ಪಾಕಿಸ್ತಾನದ ರೂಲ್ಸ್ ಪ್ರಕಾರ ಸರ್ಕಾರಿ ಪ್ರತಿನಿಧಿಯಾಗಿ ಬೇರೆ ದೇಶದ ನಾಯಕರಿಂದ ಗಿಫ್ಟ್ ರೂಪದಲ್ಲಿ ಏನೇ ಸ್ವೀಕರಿಸಿದ್ರೂ ಅದು ದೇಶದ ಖಜಾನೆಗೆ ಸೇರುತ್ತೆ. ಅಲ್ಲೇ ಇಡಬೇಕು.. ಆದ್ರೆ ಭ್ರಷ್ಟಾಚಾರ ಮುಕ್ತ ಮಾಡ್ತೀನಿ ಅಂತ ಬಂದ ಇಮ್ರಾನ್ ಖಾನ್ ಇಲ್ಲೂ ಗೇಮ್ ಪ್ಲಾನ್ ಮಾಡಿದ್ದಾರೆ. ತಾವು ಪಡೆದ ಗಿಫ್ಟ್​​ಗಳ ಮೌಲ್ಯ ಮಾಪನಕ್ಕೆ ಒಂದು ತಂಡವನ್ನು ರಚಿಸಿದ್ರು. ನಂತರ 14 ಕೋಟಿ ರೂಪಾಯಿ ಮೊತ್ತದ ಗಿಫ್ಟ್​ಗಳನ್ನು 3.8 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದಾರೆ. ಇನ್ನು 8 ಲಕ್ಷ ರೂಪಾಯಿ ಮೊತ್ತದ ಉಡುಗೊರೆಗಳನ್ನು ದುಡ್ಡೇ ಕೊಡದೇ ತಮ್ಮ ಬಳಿ ಉಳಿಸಿಕೊಂಡಿದ್ರು. ನಂತರ ಇವುಗಳನ್ನು ಪೈಕಿ ಕೆಲವೊಂದನ್ನು ದುಬೈನಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಿದ್ದಾರೆ. ದುಬೈನಲ್ಲಿ ಉಡುಗೊರೆಗಳ ಮಾರಾಟದಿಂದ ಇಮ್ರಾನ್ ಖಅನ್ 15.5 ಕೋಟಿ ರೂಪಾಯಿ ಪಡೆದಿದ್ದಾರೆ. ಇದಕ್ಕೆಲ್ಲಾ ಇಮ್ರಾನ್ ಖಾನ್ ತೆರಿಗೆ ಕಟ್ಟಿದ್ದಾರಾ ಇಲ್ವಾ ಅನ್ನೋದನ್ನ ಪರಿಶೀಲನೆ ನಡೆಸಬೇಕು ಅಂತ ಕೂಡ ಶಹಬ್ಬಾಸ್ ಶರೀಫ್ ಹೇಳಿದ್ದಾರೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಮಾಜಿ ಸಚಿವ, ಇಮ್ರಾನ್ ಖಾನ್ ಪಕ್ಷದ ನಾಯಕ ಫವಾದ್ ಚೌಧರಿ, ತಾವು ಗಿಫ್ಟ್ ಆಗಿ ಪಡೆದಿದ್ದ ವಸ್ತುಗಳನ್ನು ತಾವೇ ಖರೀದಿಸಿ, ಮಾರಾಟ ಮಾಡಿದ್ದಾರೆ. ಅದ್ರಲ್ಲಿ ತಪ್ಪೇನಿದೆ ಅಂತ ಪ್ರಶ್ನೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply