ಯುನೈಟೆಡ್ ಕಿಂಗ್​ಡಮ್​​ನಲ್ಲಿ ಡೆಲ್ಟಾ ಹಾವಳಿ!

masthmagaa.com:

ಯುನೈಟೆಡ್ ಕಿಂಗ್​​ಡಮ್​​ನಲ್ಲಿ ಡೆಲ್ಟಾ ವೈರಾಣು ಹಾವಳಿ ಮಿತಿ ಮೀರಿ ಹೋಗ್ತಿದೆ. ಆಸ್ಪತ್ರೆಗೆ ದಾಖಲಾಗ್ತಿರೋರ ಸಂಖ್ಯೆ ಜಾಸ್ತಿಯಾಗ್ತಿದೆ. ಹೀಗಾಗಿ ಲಾಕ್​ಡೌನ್​​ನ ಕೊನೆಯ ಹಂತದ ಒಂದಷ್ಟು ನಿರ್ಬಂಧಗಳನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಅಂದಹಾಗೆ ಜೂನ್ 21ರಿಂದ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಲು ಪ್ಲಾನ್ ಮಾಡಲಾಗಿತ್ತು. ಆದ್ರೆ ಈಗ ಲಾಕ್​ಡೌನ್ ಓಪನ್ ಮಾಡಿದ್ರೆ ಸಾವಿರಾರು ಮಂದಿ ಸಾವನ್ನಪ್ಪುವ, ಭಾರಿ ಸಂಖ್ಯೆಯಲ್ಲಿ ಜನ ಆಸ್ಪತ್ರೆಗೆ ದಾಖಲಾಗುವ ಅಪಾಯವಿದೆ ಅಂತ ತಜ್ಞರು ಎಚ್ಚರಿಸಿದ್ರು. ಹೀಗಾಗಿ ಮತ್ತೆ ಜುಲೈ 19ರವರೆಗೆ ನಿರ್ಬಂಧ ಮುಂದುವರಿಸಲು ನಿರ್ಧರಿಸಲಾಗಿದೆ. ಈ ಸಮಯದಲ್ಲಿ ಲಸಿಕೆ ಅಭಿಯಾನವನ್ನು ಸ್ಪೀಡ್​ ಮಾಡಿ, ಜುಲೈ 19ರ ಒಳಗಾಗಿ 3ನೇ 2ರಷ್ಟು ಜನರಿಗೆ ಲಸಿಕೆ ಹಾಕೋ ಗುರಿ ಹೊಂದಲಾಗಿದೆ.

-masthmagaa.com

Contact Us for Advertisement

Leave a Reply