ನಮಗೂ ಹಿಂಡನ್‌ಬರ್ಗ್‌ ರಿಪೋರ್ಟ್‌ಗೂ ಸಂಬಂಧ ಇಲ್ಲ: ಅಮೆರಿಕ

masthmagaa.com:

ಶ್ರೀಲಂಕಾದಲ್ಲಿ ಅಮೆರಿಕದ ಸಹಕಾರದಲ್ಲಿ ಅದಾನಿ ಸಮೂಹ ಮಾಡ್ತಿರೋ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಮಾತನಾಡಿರೋ ಅಮೆರಿಕ, ʻಈ ಯೋಜನೆಗೂ ಹಿಂಡನ್‌ಬರ್ಗ್‌ ರಿಪೋರ್ಟ್‌ನಲ್ಲಿನ ಆರೋಪಕ್ಕೂ ಸಂಬಂಧ ಇಲ್ಲʼ ಅಂತೇಳಿದೆ. “ನಮ್ಮ International Development Finance Corporation ಅಥ್ವಾ DFC, ಅದಾನಿ ಸಮೂಹದ ಕಾರ್ಯವೈಖರಿ ಬಗ್ಗೆ ಕೂಲಂಕುಷ ತನಿಖೆ ನಡೆಸಿದೆ. ಅದಾದ್ಮೇಲೆನೆ 553 ಮಿಲಿಯನ್‌ ಡಾಲರ್‌ (ಅಂದ್ರೆ ಸುಮಾರು 4.5 ಸಾವಿರ ಕೋಟಿ) ವೆಚ್ಚದಲ್ಲಿ ಕಂಟೈನರ್‌ ಟರ್ಮಿನಲ್‌ ನಿರ್ಮಿಸೋಕೆ ಸಹಕಾರ ನೀಡಲಾಗ್ತಿದೆ. ಹಿಂಡನ್‌ಬರ್ಗ್‌ ವರದಿ ಈ ಯೋಜನೆಗೆ ಇರ್ರಿಲವೆಂಟ್‌ ಆಗಿದೆ. ಅಂದ್ರೆ ಅದಕ್ಕೂ ಈ ಯೋಜನೆಗೂ ಸಂಬಂಧ ಇಲ್ಲ.” ಅಂತ ಅಮೆರಿಕನ್‌ ಅಧಿಕಾರಿ ಒಬ್ರು ಹೇಳಿದ್ದಾರೆ. ಅಮೆರಿಕದ ಈ ಹೇಳಿಕೆಯಿಂದ ನಮ್ಮ ವಿಶನ್‌ಗೆ ಅಂತಾರಾಷ್ಟ್ರೀಯವಾಗಿ ಮರುದೃಡೀಕರಣ ಸಿಕ್ಕಿದೆ ಅಂತ ಅದಾನಿ ಪೋರ್ಟ್ಸ್‌ನ CEO ಕರಣ್‌ ಅದಾನಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply