ಕ್ರಿಮಿನಲ್ ಕಿಡ್ನಿ, ಕ್ರಿಮಿನಲ್ ಲಿವರ್​, ಕ್ರಿಮಿನಲ್ ಹಾರ್ಟ್ ಇರುತ್ತಾ? : ಕೇರಳ ಹೈಕೋರ್ಟ್​​​​

masthmagaa.com:

ಅಂಗಾಂಗ ದಾನದ ವೇಳೆ ವ್ಯಕ್ತಿಯ ಕ್ರಿಮಿನಲ್ ಹಿನ್ನಲೆಗಳನ್ನು ಪರಿಗಣಿಸೋ ಅಗತ್ಯತೆ ಇಲ್ಲ ಅಂತ ಕೇರಳ ಹೈಕೋರ್ಟ್ ಆದೇಶಿಸಿದೆ. ಎರ್ನಾಕುಲಂ ಜಿಲ್ಲಾ ಮಟ್ಟದ ಅಥೋರೈಸೇಷನ್ ಕಮಿಟಿ ಫಾರ್ ಟ್ರಾನ್ಸ್​​ಪ್ಲಾಂಟೇಷನ್ ಆಫ್ ಹ್ಯೂಮನ್ ಆರ್ಗನ್ಸ್​​ ನೀಡಿದ್ದ ಆದೇಶವನ್ನು ರದ್ದುಪಡಿಸಿದೆ. ಈ ಹಿಂದೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರಾಧಾಕೃಷ್ಣ ಪಿಳ್ಳೈ ಅನ್ನೋರಿಗೆ ವ್ಯಕ್ತಿಯೊಬ್ಬರು ಕಿಡ್ನಿ ದಾನಕ್ಕೆ ಮುಂದಾಗಿದ್ರು. ಆದ್ರೆ ಈ ಕಮಿಟಿ ಡೋನರ್​​ಗೆ ಕ್ರಿಮಿನಲ್ ಹಿನ್ನಲೆ ಇದೆ. ಹೀಗಾಗಿ ಕಿಡ್ನಿ ಕಸಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಅಂತ ಹೇಳಿತ್ತು. ಇದ್ರ ವಿರುದ್ಧ ರಾಧಾಕೃಷ್ಣ ಕೇರಳ ಹೈಕೋರ್ಟ್​​​ ಮೆಟ್ಟಿಲೇರಿದ್ರು. ವಿಚಾರಣೆ ನಡೆಸಿದ ಕೋರ್ಟ್​, ದೇಹದ ಅಂಗಾಂಗಗಳಿಗೆ ಕ್ರಿಮಿನಲ್ ಹಿನ್ನಲೆ ಇರೋದಿಲ್ಲ. ಕ್ರಿಮಿನಲ್ ಕಿಡ್ನಿ, ಕ್ರಿಮಿನಲ್ ಲಿವರ್, ಕ್ರಿಮಿನಲ್ ಹಾರ್ಟ್ ಅಂತೆಲ್ಲಾ ಇರೋದಿಲ್ಲ. ಅಂಗಾಂಗ ಕಸಿಗೆ ಡೋನರ್​ನ ಕ್ರಿಮಿನಲ್ ಹಿನ್ನೆಲೆ ಪರಿಗಣಿಸೋ ಅಗತ್ಯತೆ ಇಲ್ಲ ಅಂತ ಹೇಳಿದೆ.

-masthmagaa.com

 

Contact Us for Advertisement

Leave a Reply