ಬಿಜೆಪಿಗೂ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ: ರಾಹುಲ್‌ ಗಾಂಧಿ

masthmagaa.com:

ದೇಶದ ಹೆಸ್ರನ್ನ ಇಂಡಿಯಾದಿಂದ ಭಾರತಕ್ಕೆ ಅಧಿಕೃತವಾಗಿ ಚೇಂಜ್‌ ಮಾಡಲು ಕೇಂದ್ರ ಸರ್ಕಾರ ಪ್ಲಾನ್‌ ಮಾಡ್ತಿದೆ ಅನ್ನೊ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಫ್ರಾನ್ಸ್‌ನಲ್ಲಿ ನಡೆದ ಕಾರ್ಯಕ್ರಮವೊಂದ್ರಲ್ಲಿ ಮಾತಾಡಿರುವ ರಾಹುಲ್‌ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಸಂವಿಧಾನದಲ್ಲಿ ಇಂಡಿಯಾ ಹಾಗೂ ಭಾರತ ಅನ್ನೊ ಎರಡೂ ಹೆಸರುಗಳಿವೆ. ನನಗೆ ಇದರಲ್ಲಿ ಯಾವುದೇ ಸಮಸ್ಯೆ ಕಾಣುತ್ತಿಲ್ಲ. ಎರಡೂ ಹೆಸರೂಗಳನ್ನು ನಾವೂ ಸ್ಪಷ್ಟವಾಗಿ ಒಪ್ಪಿಕೊಂಡಿದ್ದೇವೆ. ಆದ್ರೆ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ಹೆಸರು ಇರಿಟೇಟ್‌ ಮಾಡಿರಬಹುದು. ಈ ಹೆಸರು ಈಗ ತುಂಬಾನೆ ಚಾಲ್ತಿಯಲ್ಲಿದೆ. ಹೀಗಾಗಿ ದೇಶದ ಹೆಸರನ್ನೇ ಬದಲಾವಣೆ ಮಾಡಲು ಅವರು ಮುಂದಾಗಿದ್ದಾರೆ ಅಂತ ರಾಹುಲ್ ಟಾಂಗ್‌ ಕೊಟ್ಟಿದ್ದಾರೆ. ಇದೇ ವೇಳೆ ಬಿಜೆಪಿಗೂ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಭಗವದ್ಗೀತೆ, ಉಪನಿಷತ್ತು ಸೇರಿದಂತೆ ಹಲವು ಹಿಂದೂ ಪುಸ್ತಕಗಳನ್ನ ಓದಿದ್ದೇನೆ. ಅದರೆ ಬಿಜೆಪಿಯ ಹಿಂದುತ್ವ ಅದ್ಯಾವುದರಲ್ಲೂ ಕಂಡುಬಂದಿಲ್ಲ ಅಂತ ನಾನು ಹೇಳಬಲ್ಲೆ. ನಿಮಗಿಂತ ದುರ್ಬಲರನ್ನು ಹೆದ್ರಿಸಿ ಅಥವಾ ದುರ್ಬಲರಿಗೆ ಹಾನಿ ಮಾಡಿ ಅಂತ ಯಾವ ಹಿಂದೂ ಪುಸ್ತಕದಲ್ಲು ಹೇಳಿಲ್ಲ. ಈ ಬಿಜೆಪಿಯವರು ಹಿಂದೂ ರಾಷ್ಟ್ರೀಯವಾದಿಗಳಲ್ಲ. ಅವರಿಗೂ ಹಿಂದೂ ಧರ್ಮಕ್ಕೂ ಸಂಬಂಧವೇ ಇಲ್ಲ. ಅವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಅಂತ ರಾಹುಲ್‌ ವಾಗ್ದಾಳಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply