ಪೊಲೀಸರ ಕಣ್ಣಿಗೆ ಖಾರದ ಪುಡಿ! ಕೊನೆಗೂ ಎನ್​​ಕೌಂಟರ್​​ನಲ್ಲಿ ಸಾವು

masthmagaa.com:

ದೆಹಲಿಯಲ್ಲಿ ಸಿನಿಮೀಯ ರೀತಿಯಲ್ಲಿ ಒಂದು ಎನ್​​ಕೌಂಟರ್ ಘಟನೆ ನಡೆದಿದೆ. ಗೋಗಾ ಗ್ಯಾಂಗ್​​ನ ನಟೋರಿಯಸ್ ಅಪರಾಧಿ ಕುಲ್​ದೀಪ್ ಫಜ್ಜಾನನ್ನು ಚಿಕಿತ್ಸೆಗೆ ಅಂತ ಪೊಲೀಸರು ದೆಹಲಿಯ ರೋಹಿಣಿ ಸೆಕ್ಟರ್​​​ 14ನಲ್ಲಿರೋ ಜಿಟಿಬಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರು. ಈ ವೇಳೆ ಆಸ್ಪತ್ರೆಯಲ್ಲಿ ಕಾದು ಕುಳಿತಿದ್ದ ಫಜ್ಜಾ ಗ್ಯಾಂಗ್​ನ ಹುಡುಗರು ಪೊಲೀಸರ ಮೇಲೆಯೇ ದಾಳಿ ನಡೆಸಿದ್ದಾರೆ. ಖಾರ ಪುಡಿ ಎರಚಿ ಗುಂಡಿನ ದಾಳಿ ನಡೆಸಿದ್ದಾರೆ.

ಪೊಲೀಸರು ಕೂಡ ವಾಪಸ್ ಗುಂಡಿನ ದಾಳಿ ನಡಸಿ, ಓರ್ವ ಗಾಯಗೊಂಡ್ರೆ ಓರ್ವ ಸಾವನ್ನಪ್ಪಿದ್ದ. ಆದ್ರೆ ಆ ಗ್ಯಾಪಲ್ಲಿ ಕುಲ್​ದೀಪ್ ಫಜ್ಜಾ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಓಡಿಹೋಗಿ, ಅಪಾರ್ಟ್​ಮೆಂಟ್ ಒಂದ್ರಲ್ಲಿ ಅಡಗಿದ್ದ.. ವಿಷ್ಯ ತಿಳಿದ ಪೊಲೀಸರು ಅಪಾರ್ಟ್​ಮೆಂಟ್ ಬಳಿ ಹೋಗಿ ಸರೆಂಡರ್ ಆಗೋಕೆ ಹೇಳಿದ್ದಾರೆ. ಆದ್ರೆ ಕುಲ್​ದೀಪ್ ಆಗಲೂ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದಾನೆ. ಈ ಎನ್​​ಕೌಂಟರ್​​ನಲ್ಲಿ ಕುಲ್​ದೀಪ್ ಸಾವನ್ನಪ್ಪಿದ್ದಾನೆ. ಸದ್ಯ ಆತ ಅಡಗಿಕೊಳ್ಳಲು ಸಹಕರಿಸಿದ ಆರೋಪದ ಮೇಲೆ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply