ಅಮೆರಿಕಾದಲ್ಲಿ ತಮಿಳು ಪ್ರತಿಧ್ವನಿಸುತ್ತಿದೆ: ಮೋದಿ

ಹಿಂದಿ ಹೇರಿಕೆ ವಿಚಾರ ಸುದ್ದಿಯಲ್ಲಿರುವಾಗಲೇ ಪ್ರಧಾನಿ ನರೇಂದ್ರ ಮೋದಿಯವರು ತಮಿಳುನಾಡಿನ ಚೆನ್ನೈಗೆ ಭೇಟಿ ನೀಡಿದ್ದಾರೆ. ಇಲ್ಲಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ರು. ಲೋಕಸಭೆ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಚೆನ್ನೈಗೆ ಬಂದಿದ್ದೇನೆ. ನೀವು ನನಗೆ ಅದ್ಧೂರಿಯಾದ ಸ್ವಾಗತ ನೀಡಿದ್ದೀರಿ. ಅದಕ್ಕೆ ನಾನು ಆಭಾರಿಯಾಗಿದ್ದೇನೆ. ಅಮೆರಿಕಾ ಪ್ರವಾಸದಲ್ಲಿದ್ದಾಗ ನಾನು ಕೆಲವೊಂದು ತಮಿಳು ಶಬ್ದಗಳನ್ನು ಬಳಸಿದ್ದೇನೆ. ಅದು ಈಗಲೂ ಅಮೆರಿಕಾದಲ್ಲಿ ಪ್ರತಿಧ್ವನಿಸುತ್ತಿದೆ ಅಂದ್ರು. ಅಲ್ಲದೆ ಭಾರತ ಹೇಗೂ ಅಭಿವೃದ್ಧಿಯಾಗುತ್ತಿದೆ. ಆದ್ರೆ ಭಾರತ ಜಗತ್ತಿನ ಇತರ ರಾಷ್ಟ್ರಗಳಿಗೂ ನೆರವಾಗಬೇಕು. ಅಷ್ಟರ ಮಟ್ಟಿಗೆ ಭಾರತ ಬೆಳೆಯಬೇಕು. ಆದ್ರೆ ಇದು ದೆಹಲಿಯಲ್ಲಿ ಕುಳಿತ ಸರ್ಕಾರದಿಂದ ಸಾಧ್ಯವಿಲ್ಲ. ದೇಶದ 130 ಕೋಟಿ ಜನರಿಂದ ಮಾತ್ರ ಸಾಧ್ಯ ಅಂದ್ರು.

Contact Us for Advertisement

Leave a Reply