ಅಮೆರಿಕದಲ್ಲಿದೆ ಮೊಬೈಲ್‌ನ್ನೇ ಬಳಸದ ಪಟ್ಟಣ! ಏನಿದರ ಕಥೆ?

masthmagaa.com

ಈಗಿನ ಜಗತ್ತಲ್ಲಿ ಮೊಬೈಲ್‌ ಫೋನ್‌ ಮತ್ತು ಇನ್ನಿತರೆ ಎಲೆಕ್ಟ್ರಾನಿಕ್‌ ವಸ್ತುಗಳನ್ನ ಬಳಸದವರೇ ಇಲ್ಲ. ಇವುಗಳು ಇಲ್ಲಾಂದ್ರೆ ಜೀವನವೇ ನಶ್ವರ ಅನ್ನೋ ಮನಸ್ಥಿತಿ ಹಲವರಲ್ಲಿದೆ. ಅದ್ರೆ ಅಮೆರಿಕದ ಗ್ರೀನ್ ಬ್ಯಾಂಕ್ ಸಿಟಿಯಲ್ಲಿ ಸ್ಮಾರ್ಟ್‌ ಫೋನ್ಸ್‌ ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳನ್ನ ಬಳಸಿದ್ರೆ ಜೈಲು ಸೇರಬೇಕಾಗುತ್ತೆ. ಯಾಕಂದ್ರೆ ಇಲ್ಲಿ ಜಗತ್ತಿನ ಅತೀದೊಡ್ಡ ಸ್ಟೀರಬಲ್‌ ರೇಡಿಯೋ ಟೆಲಿಸ್ಕೋಪ್‌ ಇದೆ. ಈ ಟೆಲಿಸ್ಕೋಪ್‌ನ್ನ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಮೂವ್‌ ಮಾಡಬಹುದು. ಅಂದ್ಹಾಗೆ ಅಮೆರಿಕದ ರಾಷ್ಟ್ರೀಯ ರೇಡಿಯೋ ಖಗೋಳ ವೀಕ್ಷಣಾಲಯ ಈ ಟೆಲಿಸ್ಕೋಪ್‌ ಬಳಿ ಇದೆ. ಇಲ್ಲಿಂದ ವಿಜ್ಞಾನಿಗಳು ಬಾಹ್ಯಾಕಾಶದಿಂದ ಭೂಮಿಯನ್ನ ತಲುಪುವ ಅಲೆಗಳ ಬಗ್ಗೆ ಸಂಶೋಧನೆ ನಡೆಸುತ್ತಿರುತ್ತಾರೆ. ಹಾಗಾಗಿ ಇವ್ರ ಸಂಶೋಧನೆಗೆ ತೊಂದರೆಯಾಗಬಾರ್ದು ಅಂತ ಈ ನಗರದಲ್ಲಿ ಎಲೆಕ್ಟ್ರಾನಿಕ್‌ ವಸ್ತುಗಳ ಬಳಕೆಯನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

-masthmagaa.com

Contact Us for Advertisement

Leave a Reply