‘NTR ​30’ ಮುಹೂರ್ತ: ಪ್ರಶಾಂತ್ ನೀಲ್ ಕೈಕುಲುಕಿದ ರಾಜಮೌಳಿ!

masthmagaa.com:

ತೆಲುಗಿನ ಖ್ಯಾತ ನಿರ್ದೇಶಕ ಕೊರಟಾಲ ಶಿವ ​ನಿರ್ದೇಶನದ ಹಾಗೂ ಎನ್​ಟಿಆರ್​ ಅಭಿನಯದ ‘ಎನ್​ಟಿಆರ್​ 30’ ಸಿನಿಮಾದ ಮುಹೂರ್ತ ಅದ್ದೂರಿಯಾಗಿ ನೆರವೇರಿತು. ಆರ್‌ ಆರ್‌ಆರ್‌ ಸಿನಿಮಾ ಖ್ಯಾತಿಯ ನಿರ್ದೇಶಕ ಎಸ್.ಎಸ್. ರಾಜಮೌಳಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಇನ್ನೂ ಕೆಜಿಎಫ್‌ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಈ ಈವೆಂಟ್‌ನಲ್ಲಿ ಭಾಗಿಯಾದರು. ಪ್ರಶಾಂತ್ ನೀಲ್ ಹಾಗೂ ಎಸ್.ಎಸ್. ರಾಜಮೌಳಿ ಪ್ರಸಿದ್ದ ನಿರ್ದೇಶಕರಿಬ್ಬರು ಖುಷಿ ಖುಷಿಯಲ್ಲಿ ಒಬ್ಬರಿಗೊಬ್ಬರು ಹ್ಯಾಂಡ್‌ಶೇಕ್‌ ಮಾಡಿದರು. ಎನ್​ಟಿಆರ್​ 30’ ಪೂರ್ಣಗೊಂಡ ಬಳಿಕ ಜೂನಿಯರ್​ ಎನ್​ಟಿಆರ್​ ಅವರು ಪ್ರಶಾಂತ್​ ನೀಲ್​ ಜೊತೆ ಕೈ ಜೋಡಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಈ ಸಿನಿಮಾದ ಬಗ್ಗೆ ನಿರ್ದೇಶಕ ಕೊರಟಾಲ ಶಿವ ಅವರು ʻಈ ಸಿನಿಮಾವನ್ನ ಮರೆತುಹೋದ ಭಾರತದ ಕಡಲು ತೀರದಲ್ಲಿ ಮಾಡಲಾಗಿದೆ. ಇದೊಂದು ಎಮೋಷನಲ್‌ ಸ್ಟೋರಿಯಾಗಿದ್ದು, ನಾವು ಹೇಗೆ ಮನುಷ್ಯರಿಗಿಂತ ರಾಕ್ಷಸರೆ ಜಾಸ್ತಿ ಇರುವ ಪ್ರಪಂಚದಲ್ಲಿ ಬದುಕುತ್ತಿದ್ದೇವೆ ಅನ್ನೋದನ್ನ ಹೇಳುತ್ತದೆ.ʼ ಎಂದು ಸಿನಿಮಾದ ಕಥೆ ಬಗ್ಗೆ ಸುಳಿವು ಕೊಟ್ಟರು.

-masthmagaa.com

Contact Us for Advertisement

Leave a Reply