ಯೂರೋಪ್​​ನಲ್ಲಿ ಅಮೆರಿಕ ಪರಮಾಣು ರಹಸ್ಯ ಬಯಲು!

masthmagaa.com:

ಯೂರೋಪ್​​ನಲ್ಲಿ ಅಮೆರಿಕದ ಪರಮಾಣು ಶಸ್ತ್ರಾಸ್ತ್ರಗಳಿರೋ ಜಾಗಗಳ ಕುರಿತ ಮಾಹಿತಿ ಈಗ ಬಹಿರಂಗವಾಗಿದೆ. ಯೂರೋಪ್​ನಲ್ಲಿರೋ ಅಮೆರಿಕ ಯೋಧರು ಈ ಶಸ್ತ್ರಾಸ್ತ್ರಗಳ ಲೊಕೇಷನ್ ಕುರಿತು ಮಾಹಿತಿ ಸಂಗ್ರಹಿಸಿಡಲು, ಆ ಜಾಗಗಳ ಗುರುತು ಬರೆದಿಡಲು ಆಪ್​​​ಗಳನ್ನ ಬಳಸ್ತಾ ಇದ್ರು. ಆದ್ರೀಗ ಅದರಲ್ಲಿದ್ದ ಎಲ್ಲಾ ಮಾಹಿತಿ ಸಾರ್ವಜನಿಕವಾಗಿದೆ. ಇನ್ವೆಸ್ಟಿಗೇಟಿವ್ ವೆಬ್​ಸೈಟ್ ಬೆಲಿಂಗ್ಟನ್​​ ಈ ವಿಚಾರವನ್ನು ಬಹಿರಂಗಪಡಿಸಿದೆ. ಯೋಧರು ಚೆಗ್​​ ಪ್ರೆಪ್​​, ಕ್ವಿಜ್ಲೆಟ್​​ ಮತ್ತು ಕ್ರಾಮ್ ಅನ್ನೋ ಆ್ಯಪ್​​ಗಳಲ್ಲಿ ಡಿಜಿಟಲ್ ಫ್ಲಾಶ್​​ಕಾರ್ಡ್​​​​ಗಳು ಮಾಡಿಟ್ಟುಕೊಂಡಿರೋದು ಗೊತ್ತಾಗಿದೆ. ಚೆಗ್​ ಪ್ರೆಪ್​​ ಅನ್ನೋ ಆಪ್ ಒಂದ್ರಲ್ಲೇ ಸುಮಾರು 70 ಫ್ಲಾಶ್​ಕಾರ್ಡ್​​​ಗಳಿದ್ದು, ಅದಕ್ಕೆ ಸ್ಟಡಿ ಅಂತ ಹೆಸರು ಕೊಡಲಾಗಿದೆ. ಈ ದಾಖಲೆಗಳ ಪ್ರಕಾರ ಯೂರೋಪ್​​ನಲ್ಲಿ ಅಮೆರಿಕದ ಒಟ್ಟು 6 ಪರಮಾಣು ಶಸ್ತ್ರಾಸ್ತ್ರಗಳಿಗರೋ ಕೇಂದ್ರಗಳಿವೆ ಅಂತ ಆ ಫ್ಲಾಶ್​​ಕಾರ್ಡ್​​ಗಳಿಂದ ಗೊತ್ತಾಗಿದೆ. ಅದ್ರಲ್ಲಿ ಒಂದು ಕಾರ್ಡ್​​​ನಲ್ಲಿ ವೋಲ್ಕಲ್​​ ಕೇಂದ್ರದಲ್ಲಿ ಎಷ್ಟು ಪರಮಾಣು ಬಾಂಬ್​ಗಳಿವೆ ಅಂತ ಪ್ರಶ್ನಿಸಲಾಗುತ್ತೆ. ಅದಕ್ಕೆ 11 ಅಂತ ಉತ್ತರಿಸಲಾಗಿದ್ದು, ಅದರಲ್ಲಿ 6 ಹಾಟ್ ಮತ್ತು 5 ಕೋಲ್ಡ್​ ಆಗಿವೆ ಅಂತ ಉಲ್ಲೇಖಿಸಲಾಗಿದೆ. ಅಂದಹಾಗೆ ವೋಲ್ಕೆಲ್ ನೆದರ್​ಲ್ಯಾಂಡ್​​ನಲ್ಲಿ ಬರೋ ಒಂದು ಪ್ರದೇಶವಾಗಿದೆ. ಉಳಿದದಂತೆ ಕ್ರಾಮ್​​ನಲ್ಲಿ 80 ಫ್ಲಾಶ್​​ಕಾರ್ಡ್​​​ಗಳಿದ್ದು, ಇಟಲಿಯ ಏವಿಯಾನೋ ಏರ್​ಬೇಸ್​​ ಬಗ್ಗೆ ಮಾಹಿತಿ ನೀಡಿವೆ. ಉಳಿದ ಫ್ಲಾಶ್​​ಕಾರ್ಡ್​​​ಗಳಲ್ಲಿ ಟರ್ಕಿ, ಬೆಲ್ಜಿಯಂ ಮತ್ತು ಜರ್ಮನಿಯಲ್ಲಿರೋ ಅಮೆರಿಕ ನೆಲೆಗಳ ರಹಸ್ಯಗಳನ್ನು ಕೂಡ ಈ ವರದಿ ಬಿಚ್ಚಿಟ್ಟಿದೆ.

-masthmagaa.com

Contact Us for Advertisement

Leave a Reply