ಲೋಕಸಭೆಯಲ್ಲಿ ಒಬಿಸಿ ಬಿಲ್ ಪಾಸ್​.. ಅದ್ರಲ್ಲಿ ಏನೇನಿದೆ ಗೊತ್ತಾ?

masthmagaa.com:

ಮಳೆಗಾಲದ ಸಂಸತ್​ ಅಧಿವೇಶನದಲ್ಲಿ ಇವತ್ತು ಫಸ್ಟ್​ ಟೈಂ ಒಂದು ಬಿಲ್ ಬಗ್ಗೆ ಚರ್ಚೆಯಾಗಿದೆ. ತಮ್ಮದೇ ಒಬಿಸಿ ಲಿಸ್ಟ್​ ರೆಡಿ ಮಾಡಿಕೊಳ್ಳಲು ರಾಜ್ಯಗಳಿಗೆ ಅವಕಾಶ ನೀಡುವ ಸಂವಿಧಾನ ತಿದ್ದುಪಡಿ ಮಸೂದೆ 2021ನ್ನು ಲೋಕಸಭೆಯಲ್ಲಿ ಮಂಡಿಸಲಾಯ್ತು. ಈ ಬಗ್ಗೆ ದೀರ್ಘವಾಗಿ ಚರ್ಚೆ ನಡೆದು, ನಂತರ 3ನೇ 2ರಷ್ಟು ಬಹುಮತದೊಂದಿಗೆ ಪಾಸ್ ಮಾಡಲಾಗಿದೆ. ಈ ಬಿಲ್ ಸಂಬಂಧ ಚರ್ಚೆಯಲ್ಲಿ ನಾವು ಭಾಗಿಯಾಗ್ತೀವಿ ಅಂತ ವಿಪಕ್ಷದವರು ಮೊದಲೇ ಹೇಳಿದ್ರು. ಅದರಂತೆ ಚರ್ಚಿಸಿದ್ದಾರೆ. ಯಾಕಂದ್ರೆ ಈ ಬಿಲ್ ಎಲ್ಲಾ ಪಕ್ಷವರಿಗೂ ಅನಿವಾರ್ಯವೇ ಆಗಿದೆ. ಈ ಮಸೂದೆ ಒಬಿಸಿ ಅಂದ್ರೆ ಇತರೆ ಹಿಂದುಳಿಗ ವರ್ಗದಲ್ಲಿ ಬರೋ ಸಮುದಾಯಗಳನ್ನು ತಾವೇ ಲಿಸ್ಟ್ ಮಾಡಲು ರಾಜ್ಯಗಳಿಗೆ ಅವಕಾಶ ನೀಡುತ್ತೆ. ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ವಿಚಾರವಾದ್ರೆ, ನಮ್ಮ ರಾಜ್ಯದಲ್ಲಿ ಲಿಂಗಾಯತರಿಗೂ ಮೀಸಲಾತಿ ಕೂಗು ಕೇಳಿ ಬರ್ತಿದೆ. ಇಂತಾ ಹೊತ್ತಲ್ಲಿ ಈ ರೀತಿಯ ಮಸೂದೆ ಪಾಸ್ ಆಗಿರೋದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಇಷ್ಟೊಂದು ಮಹತ್ವದ ಮಸೂದೆ ಬಗ್ಗೆ ಚರ್ಚೆ ನಡೀತಿದ್ರೂ, ಕೆಲವರು ಪೆಗಾಸಸ್ ವಿಚಾರವಾಗಿ ಗಲಾಟೆ ಮಾಡಿದ್ರು. ಇಸ್ರೇಲ್, ಹಂಗೇರಿ ಮತ್ತು ಫ್ರಾನ್ಸ್​ನಲ್ಲೇ ತನಿಖೆಗೆ ಆದೇಶಿಸಿದ್ದಾರೆ. ಆದ್ರೆ ಪ್ರಧಾನಿ ಮೋದಿ ಯಾಕೆ ಚರ್ಚೆಗೆ ಹೆದರ್ತಿದ್ದಾರೆ ಅಂತ ಪ್ರಶ್ನಿಸಿದ್ರು.

-masthmagaa.com

Contact Us for Advertisement

Leave a Reply