ಮತ್ತೊಂದು ದುಸ್ಸಾಹಸಕ್ಕೆ ಕೈ ಹಾಕಿದ ಓಷನ್‌ಗೇಟ್‌ ಎಕ್ಸ್‌ಪೆಡಿಷನ್‌!

masthmagaa.com:

ಟೈಟಾನಿಕ್‌ ಅವಶೇಷ ತೋರಿಸ್ತೀನಿ ಅಂತೇಳಿ 5 ಶ್ರೀಮಂತರನ್ನ ಜಲಸಮಾಧಿ ಮಾಡಿದ್ದ ಓಷನ್‌ ಗೇಟ್‌ ಅನ್ನೋ ಸಬ್‌ಮರ್ಸಿಬಲ್‌ ಕಂಪನಿ ಇದೀಗ ಮತ್ತೊಂದು ದುಸ್ಸಾಹಸಕ್ಕೆ ಕೈ ಹಾಕ್ತಾ ಇದೆ. ಭೂಮಿಯ ಸಹೋದರಿ ಗ್ರಹ ಅಂತ ಕರೆಯುವ ಶುಕ್ರ ಗ್ರಹಕ್ಕೆ 2025 ವೇಳೆಗೆ ಒಂದು ಸಾವಿರ ಮನುಷ್ಯರನ್ನ ಕಳಿಸೋ ಗುರಿಯಿದೆ ಅಂತ ಓಷನ್‌ಗೇಟ್‌ ಎಕ್ಸ್‌ಪೆಡಿಷನ್‌ನ ಕೋ- ಫೌಂಡರ್‌ Guillermo Söhnlein ಅನೌನ್ಸ್‌ ಮಾಡಿದ್ದಾರೆ. ಈಗಾಗಲೇ ಶ್ರೀಮಂತರ ಸಾವಿನ ಕಾರಣದಿಂದ ಹಲವು ಆರೋಪಗಳನ್ನ ಫೇಸ್‌ ಮಾಡ್ತಿರೋ ಓಷನ್‌ಗೇಟ್‌ ಜಗತ್ತಿನಾದ್ಯಂತ ತೀವ್ರ ಟೀಕೆಗೆ ಗುರಿಯಾಗ್ತಿದೆ. ಇಷ್ಟಾದ್ರೂ ಈಗ ಶುಕ್ರಗ್ರಹಕ್ಕೆ ಹೋಗ್ತೀನಿ ಅಂತೇಳಿರೋದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಯಾರ್‌ ಹೋಗ್ತಾರೋ ಗೊತ್ತಿಲ್ಲ.

-masthmagaa.com

Contact Us for Advertisement

Leave a Reply