ಗಿನ್ನೆಸ್‌ ಬುಕ್‌ ಆಫ್‌ ವರ್ಲ್ಡ್‌ ಸೇರಿದ ಒಡಿಶಾದ ಬಿರ್ಸಾ ಮುಂಡ ಹಾಕಿ ಸ್ಟೇಡಿಯಂ!

masthmagaa.com:

2023ರ ಹಾಕಿ ವಿಶ್ವಕಪ್‌ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಒಡಿಶಾದ ಬಿರ್ಸಾ ಮುಂಡಾ ಹಾಕಿ ಸ್ಟೇಡಿಯಂಗೆ ಗಿನ್ನೆಸ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ಪ್ರಶಸ್ತಿ ದೊರೆತಿದೆ. ರೂರ್ಕೆಲಾದಲ್ಲಿರುವ ಈ ಸ್ಟೇಡಿಯಂ 20 ಸಾವಿರ ಆಸನಗಳ ಸಾಮರ್ಥ್ಯವನ್ನ ಹೊಂದಿದೆ. ಈ ಮೂಲಕ ವಿಶ್ವದಲ್ಲೇ ಅತಿಹೆಚ್ಚು ಆಸನಗಳನ್ನ ಹೊಂದಿರುವ ಹಾಕಿ ಸ್ಟೇಡಿಯಂ ಅಂತ ವಿಶ್ವ ದಾಖಲೆ ಬರೆದಿದೆ. ಈ ಮಾಹಿತಿಯನ್ನ ಒಡಿಶಾದ ಸಿಎಂ ಕಚೇರಿ ಟ್ವೀಟ್‌ ಮಾಡಿ ಹಂಚಿಕೊಂಡಿದೆ.

-masthmagaa.com

Contact Us for Advertisement

Leave a Reply