ಕರ್ನಾಟಕ, ದೇಶದ ಮಳೆ ಮಾಹಿತಿ! ಎಲ್ಲೆಲ್ಲಿ ಮಳೆ? ಇಲ್ಲಿ ನೋಡಿ!

masthmagaa.com:

ರಾಜ್ಯದ ಕೆಲವೊಂದು ಕಡೆ ಇವತ್ತು ಮಳೆಯಾಗಿದೆ ಕಳೆದ 24 ಗಂಟೆಯಲ್ಲಿ ಉಡುಪಿಇ ಜಿಲ್ಲೆ ಕುಂದಾಪುರ ತಾಲೂಕಿನ ತ್ರಾಸಿ ಎಂಬಲ್ಲಿ ಅತಿಹೆಚ್ಚು 75 ಮಿಲಿಮೀಟರ್ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಬಹುತೇಕ ಕಡೆ ಸಾಧರಣ ಮಳೆ, ಕೆಲವೊಂದುಕಡೆ ಭಾರಿ ಮಳೆಯಾಗೋ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಜಿಲ್ಲೆಗಳ ಕೆಲವೊಂದುಕಡೆ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಇನ್ನು ಆಂಧ್ರದ ತಿರುಮಲ ಘಾಟ್​​ ರಸ್ತೆಯಲ್ಲಿ ಭೂಕುಸಿತ ಆಗಿರೋ ಹಿನ್ನೆಲೆ ವೆಂಕಟೇಶ್ವರ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಬಂದ್​ ಆಗಿದೆ.
ಇನ್ನು ಕರ್ನಾಟಕದ ದಕ್ಷಿಣ ಒಳನಾಡು, ಆಂಧ್ರ, ತಮಿಳುನಾಡು ಮತ್ತು ಕೇರಳದಲ್ಲಿ ಡಿಸೆಂಬರ್​ನಿಂದ ಫೆಬ್ರವರಿವರೆಗೆ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚು ಮಳೆಯಾಗೋ ಸಾಧ್ಯತೆ ಇದೆ ಅಂತ ಭಾರತೀಯ ಹವಾಮಾನ ಇಲಾಖೆ ಅಂದಾಜು ಮಾಡಿದೆ.

-masthmagaa.com

Contact Us for Advertisement

Leave a Reply