‘ಐಟಂ ಡ್ಯಾನ್ಸಗೆ ಕೊಹ್ಲಿಗೆ ಆಫರ್ ಕೊಡ್ತೀನಿ ‘: ಕಮಾಲ್ ಆರ್ ಖಾನ್

masthmagaa.com:

ಸ್ವಯಂ ಘೋಷಿತ ಚಲನಚಿತ್ರ ವಿಮರ್ಶಕ ಮತ್ತು ಮಾಜಿ ನಟ ಕೆಆರ್‌ಕೆ ಎಂದೂ ಕರೆಯಲ್ಪಡುವ ಕಮಾಲ್ ಆರ್ ಖಾನ್, ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ ವಿರಾಟ್ ಕೊಹ್ಲಿ ಅವರಿಗೆ ತನ್ನ ಚಿತ್ರದಲ್ಲಿ ಐಟಂ ಡ್ಯಾನ್ಸ್‌ ಮಾಡೋಕೆ ಅವಕಾಶ ಕೊಡ್ತೀನಿ ಅಂತ ಕಮಾಲ್‌ ಖಾನ್‌ ಹೇಳಿದ್ದಾರೆ.

ಏಪ್ರಿಲ್ 14 ರಂದು, ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ಸಂತೋಷದಿಂದ ನೃತ್ಯ ಮಾಡುತ್ತಿರುವ ವಿಡಿಯೋ ಕ್ಲಿಪ್ ಅನ್ನು ಮಾಧುರಿ ದೀಕ್ಷಿತ್ ಅವರ ಮಾರ್ ಡಾಲಾ ಹಾಡಿಗೆ ಜಾಯ್ನ್‌ ಮಾಡಿ ವಿಡಿಯೋವನ್ನ ಶೇರ್‌ ಮಾಡಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಚಿತ್ರ ದೇವದಾಸ್ ಇವರು ಎಡಿಟ್‌ ಮಾಡಿದ ಈ ವಿಡಿಯೋದಲ್ಲಿ ಕೋಹ್ಲಿ RCB ಸಮವಸ್ತ್ರದಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಇಷ್ಟಕ್ಕೆ ಸುಮ್ಮನಾಗದ ಕಮಾಲ್‌ “ಕೊಹ್ಲಿ ಅವರ ಡ್ಯಾನ್ಸ್‌ಗೆ ನನಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ನನ್ನ ಮುಂದಿನ ಚಿತ್ರ ” ದೇಶ್‌ದ್ರೋಹಿ 2″ನಲ್ಲಿ ವಿರಾಟ್‌ಗೆ ಐಟಂ ಡ್ಯಾನ್ಸ್‌ ಮಾಡೋಕೆ ಅವಕಾಶ ಮಾಡಿಕೊಡ್ತೀನಿ” ಅಂತ ವ್ಯಂಗ್ಯವಾಡಿದ್ದಾರೆ.
ಇನ್ನು ದೇಶ್‌ದ್ರೋಹಿ ಚಿತ್ರವನ್ನ ಕಮಾಲ್‌ ಅವರು ನಿರ್ಮಾಣ ಮಾಡಿದ್ದರು, ಚಿತ್ರ ವಿಮರ್ಶಕರಿಂದ ಒಳ್ಳೆಯ ಪ್ರಶಂಸೆಯನ್ನೂ ಸಹ ಪಡೆದಿರಲಿಲ್ಲ. ಕಮಾಲ್‌ ಅವರ ನಟನೆ, ಬಾಲಿವುಡ್‌ ಸಿನಿಮಾ ಹಾಗೂ ನಟ ನಟಿಯರ ಮೇಲೆ ಗಾಸಿಪ್‌ ಕ್ರೀಯೆಟ್‌ ಮಾಡೋ ಇವರ ಕೆಟ್ಟ ಮನಸ್ಥಿತಿಗೆ ಅಭಿಮಾನಿಗಳು ತರಾಟೆಗೆ ತೆಗೆದುಕೋಳ್ತಿದ್ದರು.

ಇನ್ನು ಇವರ ಎಡಿಟೆಡ್‌ ವಿಡಿಯೋ ನೋಡಿ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸ್ತಾ ಇದಾರೆ. “ನಿನ್ನ ಸಿನಿಮಾದಲ್ಲಿ ವಿರಾಟ್​ ಕೊಹ್ಲಿ ಡ್ಯಾನ್ಸ್​ ಮಾಡಿದರೆ ಅವರಿಗೆ ಸಂಭಾವನೆ ನೀಡಲು ನಿನ್ನ ಆಸ್ತಿ ಮಾರಿಕೊಳ್ಳಬೇಕಾಗುತ್ತದೆ’ ಎಂದು ನೆಟ್ಟಿಗರು ಖಡಕ್​ ಆಗಿ ಕಾಮೆಂಟ್​ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply