ಅಧಿಕೃತವಾಗಿ ಆರ್‌ಸಿಬಿ ಪ್ರಚಾರಕ್ಕಿಳಿದ ಹೊಂಬಾಳೆ ಫಿಲ್ಮ್ಸ್‌

masthmagaa.com:

ಹೊಂಬಾಳೆ ಫಿಲ್ಮ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಕಳೆದ ವರ್ಷ ಅಂದರೆ 2022ರಲ್ಲಿ ಕೋಲಾಬರೇಟ್‌ ಮಾಡಿಕೊಂಡಿದ್ದವು. ಮೊದಲ ಹಂತದಲ್ಲಿ ಹೊಂಬಾಳೆ ಮತ್ತು ಆರ್‌ಸಿಬಿ 3 ವರ್ಷಗಳ ಅಗ್ರಿಮೆಂಟ್‌ ಮಾಡಿಕೊಂಡಿದೆ. ಇದರ ಪ್ರಕಾರ ಹೊಂಬಾಳೆ ಮತ್ತು ಆರ್‌ಸಿಬಿ ಪ್ರಚಾರ ರಾಯಭಾರಿಯಾಗಿ ಕೆಲಸ ಮಾಡುತ್ತವೆ. ಕನ್ನಡಿಗರ ಹಾಟ್‌ ಫೆವರೇಟ್‌ ಆದಂತ ಆರ್‌ಸಿಬಿ ತಂಡಕ್ಕೆ ಇನ್ನು ಮುಂದೆ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್‌, ಅಧಿಕೃತ ಡಿಜಿಟಲ್‌ ಕಂಟೆಂಟ್‌ ಕ್ರೀಯೆಟರ್‌ ಆಗಿ ಕೆಲಸ ಮಾಡತ್ತೆ. ಕಳೆದ ವರ್ಷ ಹೊಂಬಾಳೆ ಸಂಸ್ಥೆಯಡಿ ನಿರ್ಮಾಣವಾದ ಮೂವಿಗಳಿಗೆ ಆರ್‌ಸಿಬಿ ಪ್ರಚಾರಕ್ಕೆ ಸಹಾಯ ಮಾಡಿತ್ತು. ಇನ್ನು ಕೆಜಿಎಫ್‌-2 ಚಿತ್ರ ಬಿಡುಗಡೆ ಆದಾಗಲೂ ಸಹ ಆರ್‌ಸಿಬಿ ತಂಡದ ಪರವಾಗಿ ಹೊಂಬಾಳೆ ಫಿಲ್ಮ್ಸ್‌ ಥಿಯೇಟರ್‌ನಲ್ಲಿ ಆರ್‌ಸಿಬಿಯನ್ನ ಪ್ರಚಾರ ಮಾಡುವ ಮೂಲಕ ಕ್ರಿಕೆಟ್‌ ಫ್ರ್ಯಾಂಚಸ್‌ಗೆ ಸಪೋರ್ಟ್‌ ಮಾಡಿದ್ರು. ಇನ್ನೂ ಈ ಪ್ರಚಾರದ ವಿಡಿಯೋದಲ್ಲಿ ರಾಕಿಭಾಯ್‌, ವಿರಾಟ್‌ ಕೊಹ್ಲಿ, ಹಾಗೂ ಅಧೀರನ ವಿಡಿಯೋಗಳನ್ನ ತಮ್ಮ ಹೊಂಬಳೆ ಫಿಲ್ಮ್ಸ್‌ ಶೇರ್‌ ಮಾಡಿ “ದೇಶವನ್ನು ರೋಮಾಂಚನಗೊಳಿಸಲು ಬೆಂಗಳೂರಿನಲ್ಲಿ ಹುಟ್ಟಿದೆ” ಅಂತ ಕ್ಯಾಪ್ಶನ್‌ ಕೊಟ್ಟಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೊಂಬಾಳೆ ಫಿಲ್ಮ್ಸ್‌ ಆರ್‌ಸಿಬಿ ತಂಡದ ಓಫಿಷಿಯಲ್‌ ಡಿಜಿಟಲ್‌ ಕಂಟೆಂಟ್‌ ಕ್ರೀಯೆಟರ್‌ ಆಗಿ ಹೊರಹೊಮ್ಮಿದೆ. ಈ ವಿಚಾರವನ್ನ ಸ್ವತಃ ಹೊಂಬಾಳೆ ಫಿಲ್ಮ್ಸ್‌ ಟ್ವೀಟ್‌ ಮಾಡುವ ಮೂಲಕ ಹಂಚಿಕೊಂಡಿದೆ.

“ನಮಗೆ ಸರಿಯಾದ ಮ್ಯಾಚ್‌ ಸಿಕ್ಕಿದೆ. ಆರ್‌ಸಿಬಿಯ ಓಫಿಷಿಯಲ್‌ ಕಂಟೆಂಟ್‌ ಪಾರ್ಟನರ್‌ ಆಗೋಕೆ ತುಂಬಾನೇ ಉತ್ಸುಕರಾಗಿದ್ದೇವೆ. ಹೊಂಬಾಳೆ ಫಿಲ್ಮ್ಸ್‌ ಮತ್ತು ಆರ್‌ಸಿಬಿ ಯಿಂದ ಹೊರಬರಲಿರುವ ಎಕ್ಸೈಟಿಂಗ್‌ ಕಂಟೆಂಟ್‌ ಆಸ್ವಾದಿಸಲು ರೆಡಿಯಾಗಿ” ಎಂದು ಹೊಂಬಾಳೆ ಫಿಲ್ಮ್ಸ್‌ ಟ್ವೀಟ್‌ ಮಾಡಿದೆ.

-masthmagaa.com

Contact Us for Advertisement

Leave a Reply