ಬೆಂಗಳೂರಿನಲ್ಲಿ 15 ಐಷಾರಾಮಿ ಕಾರು ವಶ.. ಯಾಕೆ ಗೊತ್ತಾ?

masthmagaa.com:

ಬೆಂಗಳೂರಿನ ಯುಬಿ ಸಿಟಿ ಬಳಿ ಆರ್​ಟಿಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಸರಿಯಾದ ದಾಖಲೆ ಇಲ್ಲದ, ಟ್ಯಾಕ್ಸ್ ಕಟ್ಟದ, ಇನ್ಶುರೆನ್ಸ್ ಇಲ್ಲದ 15 ಐಷಾರಾಮಿ ಕಾರ್​ಗಳನ್ನ ಸೀಜ್ ಮಾಡಿದ್ದಾರೆ. ಇದರಲ್ಲಿ ಬಾಲಿವುಡ್​ ನಟ ಅಮಿತಾಬ್ ಬಚ್ಚನ್​ ಬಳಿ ಈ ಹಿಂದೆ ಇದ್ದ ರೋಲ್ಸ್ ರಾಯ್ಸ್ ಕಾರು ಕೂಡ ಸೇರಿದೆ. ಈ ಕಾರನ್ನ ಸಲ್ಮಾನ್ ಖಾನ್​ ಡ್ರೈವ್ ಮಾಡ್ತಿದ್ದ. ಸಲ್ಮಾನ್ ಖಾನ್ ಅಂದ್ರೆ ಬಾಲಿವುಡ್​ ನಟ ಸಲ್ಮಾನ್ ಖಾನ್ ಅಲ್ಲ. ಬೇರೆ ಸಲ್ಮಾನ್ ಖಾನ್. ಈತನ ಬಳಿ ದಾಖಲೆ ಕೇಳ್ದಾಗ ಸರಿಯಾದ ದಾಖಲೆ ಕೊಟ್ಟಿಲ್ಲ. ಅಲ್ಲದೆ ಇದರ ಇನ್ಶುರೆನ್ಸ್ ಕೂಡ ಇರಲಿಲ್ಲ ಅಂತ ಗೊತ್ತಾಗಿದೆ. ಹೀಗಾಗಿ ಈ ಕಾರನ್ನ ಜಪ್ತಿ ಮಾಡಲಾಗಿದೆ. ಅಂದ್ಹಾಗೆ ಅಮಿತಾಬ್ ಬಚ್ಛನ್​ ಈ ಕಾರನ್ನ ಬೆಂಗಳೂರು ಮೂಲದ ಉದ್ಯಮಿ​ ಒಬ್ಬರಿಗೆ ಸೇಲ್ ಮಾಡಿದ್ರು.

-masthmagaa.com

Contact Us for Advertisement

Leave a Reply