ಸೌದಿ, ಇರಾನ್‌, ಪಾಕಿಸ್ತಾನ ನೇತೃತ್ವದ ಸಭೆಯಲ್ಲಿ ಕಾಶ್ಮೀರ ವಿಚಾರ!

masthmagaa.com:

ಬಾಯ್ತೆರೆದ್ರೆ ಕಾಶ್ಮೀರ ಪದ ಹಾಡೋ ಪಾಕಿಸ್ತಾನ ಈಗ ಮತ್ತೆ ತನ್ನ ಅದೇ ಹಳೇ ಚಾಳಿಯನ್ನೇ ಕಂಟಿನ್ಯೂ ಮಾಡಿದೆ. ಗ್ಯಾಂಬಿಯಾದಲ್ಲಿ ನಡೆದ ಆರ್ಗನೈಸೇಷನ್‌ ಆಫ್‌ ಇಸ್ಲಾಮಿಕ್‌ ಕೋಪರೇಷನ್‌ (OIC) ಶೃಂಗಸಭೆಯಲ್ಲಿ ಕಾಶ್ಮೀರದ ವಿಚಾರವನ್ನ ಮತ್ತೆ ಹೇಳಿದೆ. ಗಾಜಾ ಯುದ್ಧ ಮತ್ತು ಮುಸ್ಲಿಂರು ಫೇಸ್‌ ಮಾಡ್ತಿರೋ ಇತರೆ ಸಮಸ್ಯೆಗಳ ಬಗ್ಗೆ ಡಿಸ್‌ಕಸ್‌ ಮಾಡಬೇಕು ಅಂತ ಸೌದಿ, ಇರಾನ್‌, ಪಾಕಿಸ್ತಾನ ನೇತೃತ್ವದಲ್ಲಿ ಸಭೆ ಸೇರಲಾಗಿತ್ತು. ಆದ್ರೆ ಈ ವೇಳೆ ತಮ್ಮ ಮಿತ್ರ ದೇಶಗಳ ಬಳಿ ಸೈಡ್‌ಲೈನ್ಸ್‌ನಲ್ಲಿ ಕಾಶ್ಮೀರದ ಬಗ್ಗೆ ಪಾಕ್‌ ಚರ್ಚೆ ಮಾಡಿದೆ ಅಂತ ವರದಿಯಾಗಿದೆ. ಆದ್ರೆ ಪಾಕಿಸ್ತಾನದ ಈ ರಾಗಕ್ಕೆ ಉಳಿದ ಮುಸ್ಲಿಂ ದೇಶಗಳು ಏನ್‌ ಹೇಳಿದ್ವು ಅನ್ನೋ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.

-masthmagaa.com

Contact Us for Advertisement

Leave a Reply