ತಾಲಿಬಾನ್ ಕೈಬಿಟ್ಟ ಇಸ್ಲಾಮಿಕ್ ರಾಷ್ಟ್ರಗಳ ಸಂಘ!

masthmagaa.com:

ಅಫ್ಘಾನಿಸ್ತಾನದಲ್ಲಿ ಹಿಂಸಾಮಾರ್ಗವಾಗಿ ಇಸ್ಲಾಮಿಕ್ ಸರ್ಕಾರ ತಂದ ತಾಲಿಬಾನಿಗಳನ್ನು ಒಐಸಿ ಅಂದ್ರೆ ಇಸ್ಲಾಮಿಕ್ ದೇಶಗಳ ಸಂಘಟನೆಯೇ ಕೈಬಿಟ್ಟಿದೆ. ಪಾಕಿಸ್ತಾನದ ಇಸ್ಲಾಮಾಬಾದ್​​ನಲ್ಲಿ ನಡೆದ ಈ ಸಂಘಟನೆಯ ಸಭೆ ಅಫ್ಘಾನಿಸ್ತಾನಕ್ಕೆ ಯಾವುದೇ ಆರ್ಥಿಕ ಮತ್ತು ಮಾನವೀಯ ನೆರವಿನ ಘೋಷಣೆಯಿಲ್ಲದೇ ಅಂತ್ಯಗೊಂಡಿದೆ. ಈ ಸಭೆಯಲ್ಲಿ ಸುಮಾರು 57 ಇಸ್ಲಾಮಿಕ್ ದೇಶಗಳ ಪ್ರತಿನಿಧಿಗಳ ಜೊತೆಗೆ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಆಮಿರ್ ಖಾನ್ ಮುಟಾಕಿ, ಅಮೆರಿಕ, ಚೀನಾ, ರಷ್ಯಾ, ಯೂರೋಪಿಯನ್ ಯೂನಿಯನ್, ವಿಶ್ವಸಂಸ್ಥೆಯ ನಿಯೋಗಗಳು ಕೂಡ ಭಾಗಿಯಾಗಿದ್ವು. ಅಫ್ಘಾನಿಸ್ತಾನದಿಂದ ಅಮೆರಿಕ ಹೊರಹೋದ ಬಳಿಕ ಯುದ್ಧಪೀಡಿತ ಆ ದೇಶಕ್ಕೆ ಸಂಬಂಧಿಸಿದಂತೆ ನಡೆದ ಮೊದಲ ಸಭೆ ಇದಾಗಿತ್ತು. ಇದ್ರಲ್ಲಿ ನಿರ್ಣಯ ಅಂಗೀಕರಿಸಿರೋ ಇಸ್ಲಾಮಿಕ್ ದೇಶಗಳು, ಅಫ್ಘಾನಿಸ್ತಾನದಲ್ಲಿನ ಮಾನವೀಯ ಬಿಕ್ಕಟ್ಟು ಎಚ್ಚರಿಕೆಯ ಕರೆಗಂಟೆಯಾಗಿದೆ ಅಂತ ಹೇಳಿದೆ. ಜೊತೆಗೆ ಅಫ್ಘಾನಿಸ್ತಾನದ ಆರೋಗ್ಯ ವ್ಯವಸ್ಥೆಯ ಸ್ಥಿತಿ, ಕಾಯಿಲೆ, ಅಪೌಷ್ಠಿಕತೆ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದು, ಆರ್ಥಿಕ ಸಹಕಾರವನ್ನು ಮುಂದುವರಿಸೋ ಅಗತ್ಯತೆ ಇದೆ. ಎಲ್ಲರೂ ಅಫ್ಘಾನಿಸ್ತಾನದ ಸಾರ್ವಭೌಮತೆ, ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಅಂತ ಹೇಳಿದೆ. ಆದ್ರೆ ಯಾರೂ ಕೂಡ ನಾವು ಅಫ್ಘಾನಿಸ್ತಾನಕ್ಕೆ ನೆರವು ಕೊಡ್ತೀವಿ ಅಂತ ಮಾತ್ರ ಹೇಳಲೇ ಇಲ್ಲ.. ಇದೇ ಸಭೆಯಲ್ಲಿ ಮಾತಾಡಿದ ಅಫ್ಘನ್ ವಿದೇಶಾಂಗ ಸಚಿವ ಆಮೀರ್ ಖಾನ್ ಮುಟಾಕಿ, ಅಫ್ಘನಿಸ್ತಾನದಲ್ಲಿ ತಾಲಿಬಾನ್​ ಶಾಂತಿ ಸ್ಥಾಪಿಸಿದೆ. ಈಗಲಾದ್ರೂ ಅಮೆರಿಕ ಫ್ರೀಜ್ ಮಾಡಿರೋ ಅಫ್ಘಾನಿಸ್ತಾನದ ದುಡ್ಡನ್ನು ಬಿಡುಗಡೆ ಮಾಡಬೇಕು ಅಂತ ಮನವಿ ಮಾಡಿದ್ರು. ಇನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾತಾಡಿ, ಅಫ್ಘಾನಿಸ್ತಾನದ ಪರಿಸ್ಥಿತಿ ಸುಧಾರಿಸಲು ಹೆಜ್ಜೆ ಇಡದೇ ಇದ್ರೆ, ಇಡೀ ವಿಶ್ವದ ಅತಿದೊಡ್ಡ ಮಾನವ ನಿರ್ಮಿತ ಬಿಕ್ಕಟ್ಟಿಗೆ ಕಾರಣವಾಗುತ್ತೆ. ಅಫ್ಘಾನಿಸ್ತಾನ ಸಫರ್ ಮಾಡಿದಂತೆ ಯಾವ ದೇಶವೂ ಸಫರ್ ಮಾಡಿಲ್ಲ. ಅಮೆರಿಕ ಹೊರಹೋಗೋ ಮುನ್ನ ಅಫ್ಘಾನಿಸ್ತಾನದ 75 ಪರ್ಸೆಂಟ್ ಬಜೆಟ್ ವಿದೇಶಿ ನೆರವಿನಿಂದ ಕೂಡಿತ್ತು. ಈಗ ಆ ನೆರವನ್ನು ಬಂದ್ ಮಾಡೋದು ಸರಿಯಲ್ಲ.. ಅದು ಅಮೆರಿಕಕ್ಕೆ ಶೋಭೆ ತರಲ್ಲ. ತಾಲಿಬಾನಿಗಳು ತಾವು ಕೊಟ್ಟಿದ್ದ ಮಾತಿನಂತೆ ನಡ್ಕೊಂಡಿದ್ದಾರೆ. ಅಂತಾರಾಷ್ಟ್ರೀಯವಾಗಿ ಉತ್ತಮ ಸಂಬಂಧ ಹೊಂದಿದ್ದಾರೆ. ಮಹಿಳೆಯರ ಹಕ್ಕುಗಳು ಸೇರಿದಂತೆ ಮಾನವ ಹಕ್ಕುಗಳನ್ನು ರಕ್ಷಿಸಿದ್ದಾರೆ. ಎಲ್ಲರನ್ನು ಒಳಗೊಂಡ ಸರ್ಕಾರ ಕೂಡ ರಚಿಸಿದ್ದಾರೆ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ.. ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಶಿಕ್ಷಣದಿಂದ ಹೊರಗಿಟ್ಟಿರೋ ನಿರ್ಧಾರವನ್ನು ಕೂಡ ಸಮರ್ಥಿಸಿಕೊಂಡು ನಾಚಿಕೆಗೆಟ್ಟಿದ್ದಾರೆ. ಒಟ್ನಲ್ಲಿ ಈ ಸಭೆ ಕೂಡ ಬರೀ ಮಾತಲ್ಲೇ ಕಳೆದು ಹೋಗಿದೆ ಬಿಟ್ರೆ, ಅಫ್ಘಾನಿಸ್ತಾನಕ್ಕೆ ನಾವು ನೆರವು ಕೊಡ್ತೀವಿ ಅಂತ ಯಾವ ದೇಶವೂ ಹೇಳಲೇ ಇಲ್ಲ.

-masthmagaa.com

Contact Us for Advertisement

Leave a Reply