ದೇಶದಲ್ಲಿ ತೈಲ ಆಮದು ʻಬೆಲೆʼ ಇಳಿಕೆ! ಕಾರಣವೇನು?

masthmagaa.com:

ಈ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಅಂದ್ರೆ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಭಾರತದ ತೈಲ ಅಮದಿನ ವೆಚ್ಚ ಕಳೆದ ವರ್ಷಕ್ಕೆ ಹೋಲಿಸಿದ್ರೆ ಕಮ್ಮಿಯಾಗಿದೆ ಅಂತ ಗೊತ್ತಾಗಿದೆ. ಜಾಗತಿಕ ಆರ್ಥಿಕತೆ ನಿಧಾನವಾಗ್ತಿದ್ದು, ಮಾನ್ಸೂನ್‌ ಕಾರಣದಿಂದ ಇಂಧನದ ಬಳಕೆ ಹಾಗೂ ಬೇಡಿಕೆ ಕಮ್ಮಿಯಾಗಿದೆ. ಈ ಕಾರಣಕ್ಕೆ ಕಚ್ಚಾ ತೈಲದ ಆಮದಿನ ವೆಚ್ಚ 20.6% ಕಮ್ಮಿಯಾಗಿದೆ ಅಂತ ಇಂಧನ ಸಚಿವಾಲಯ ಹೇಳಿದೆ. ಆದ್ರೆ ಇದೇ ವೇಳೆ ಆಮದಾಗಿರೊ ತೈಲದ ʻಪ್ರಮಾಣʼ ಹೆಚ್ಚಾಗಿದೆ ಅಂತ ತಿಳಿದು ಬಂದಿದೆ. ಕಳೆದ ವರ್ಷಕ್ಕಿಂತ 29.1 ಬಿಲಿಯನ್‌ ಡಾಲರ್‌, ಅಂದ್ರೆ ಸುಮಾರು 2.41 ಲಕ್ಷ ಕೋಟಿ ರೂಪಾಯಿಗಳಷ್ಟು ಕಡಿಮೆ ವೆಚ್ಚದಲ್ಲಿ ಇಂಧನವನ್ನ ಇಂಪೋರ್ಟ್‌ ಮಾಡಲಾಗಿದೆ. ಪ್ರತಿ ಬ್ಯಾರಲ್‌ ತೈಲಕ್ಕೆ ಸರಾಸರಿ 82.34 ಡಾಲರ್‌, ಅಂದ್ರೆ ಸುಮಾರು 6,834 ರೂಪಾಯಿ ವೆಚ್ಚದಲ್ಲಿ ಆಮದು ಮಾಡಲಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಪ್ರತಿ ಬ್ಯಾರಲ್‌ಗೆ 103.68 ಡಾಲರ್ ಅಂದ್ರೆ ಸುಮಾರು 8‌,605 ರ ಸರಾಸರಿಯಲ್ಲಿ ಭಾರತ ತೈಲ ಖರೀದಿ ಮಾಡಿತ್ತು ಅಂತ ಸಚಿವಾಲಯ ಹೇಳಿದೆ. ಅಂದ್ಹಾಗೆ ಚೀನಾ, ಅಮೆರಿಕ ನಂತ್ರ ಭಾರತ ಪ್ರಪಂಚದ ಅತಿ ದೊಡ್ಡ ಇಂಧನ ಬಳಕೆದಾರ ದೇಶವಾಗಿದೆ. ಜಾಗತಿಕ ಅಸ್ಥಿರತೆ ನಡುವೆಯೂ, ರಷ್ಯಾದಿಂದ ರಿಯಾಯಿತಿ ದರದಲ್ಲಿ ಇಂಧನ ಖರೀದಿ ಮಾಡ್ತಿರೋದು, ಹಲವು ತಿಂಗಳುಗಳಿಂದ ಮಾರಾಟದ ಬೆಲೆಯನ್ನ ಫ್ರೀಜ಼್ ಮಾಡಿರೋದು ಸಹ ತೈಲ ಮಾರ್ಕೆಟ್‌ನಲ್ಲಿ ಸ್ಥಿರತೆ ಕಾಪಾಡಲು ಸಹಾಯ ಮಾಡಿದೆ ಅಂತ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ

-masthmagaa.com

Contact Us for Advertisement

Leave a Reply